ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಧನೆಯ ಸಿಂಹಾವಲೋಕನವೆ ಸ್ನೇಹ ಸಮ್ಮೇಳನ : ಚನ್ನಪ್ಪಗೌಡ್ರ ನಾಡಗೌಡ್ರ

ಬಾಗಲಕೋಟೆ/ ಇಳಕಲ್: ವರ್ಷಪೂರ್ತಿ ಶಾಲೆಯಲ್ಲಿ ನಡೆದ ಎಲ್ಲಾ ಘಟನಾವಳಿಗಳನ್ನು ಮೆಲುಕು ಹಾಕುವುದರೊಂದಿಗೆ ಬಾಲಕ ಪಾಲಕ ಶಿಕ್ಷಕರ ಜೊತೆ ಎಸ್ ಡಿ ಎಮ್ ಸಿ ಸಮಿತಿಯವರೊಂದಿಗೆ ಸಾರ್ವಜನಿಕರು ಸೇರಿ ಪ್ರೀತಿ ಪ್ರೇಮ ವಿಶ್ವಾಸವನ್ನು ಮೂಡಿಸುವ ಹಾಗೂ ಪ್ರತಿ ಮಗುವಿನ ಸಾಧನೆಯ ಸಿಂಹಾವಲೋಕನವೇ ಈ ವಾರ್ಷಿಕ ಸ್ನೇಹ ಸಮ್ಮೇಳನ ಇದರಿಂದ ಶಾಲೆಯಲ್ಲಿ ಸೃಜನಶೀಲತೆಯೊಂದಿಗೆ ಎಲ್ಲರೂ ಒಂದಾಗಿ ವರ್ಷಕ್ಕೊಮ್ಮೆ ನಡೆಸುವ ಶಾಲಾ ಹಬ್ಬ ಉಲ್ಲಾಸದ ಸಮಯ ಎಂದು ತಾಲೂಕಿನ ಕಂದಗಲ್ಲ ಗ್ರಾಮದ ಸರಕಾರಿ ಮಾದರಿ ಹೆಣ್ಣುಮಕ್ಕಳ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸುವದರ ಮೂಲಕ ಉದ್ಘಾಟಿಸಿ ಗ್ರಾಮದ ಪ್ರಗತಿಪರ ರೈತರಾದ ಚನ್ನಪ್ಪಗೌಡ್ರ ನಾಡಗೌಡ್ರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ ಸ್‌. ಡಿ. ಎಂ. ಸಿ. ಅಧ್ಯಕ್ಷ ಸಂಗಪ್ಪ ಬುಕ್ಕಿಟಗಾರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಸ್‌.ಡಿ.ಎಂ.ಸಿ.ಯ ಸರ್ವ ಸದಸ್ಯರು, ವಿವಿಧ ಶಾಲೆಯ ಶಿಕ್ಷಕರು ಆಗಮಿಸಿದ್ದರು.
ಬಸವಣ್ಣನವರ ವಚನ ನೃತ್ಯ ಹಾಗೂ ರೈತ ಗೀತೆ ನೃತ್ಯದ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಎಸ್. ಹೆಚ್. ಭಾವಿಕಟ್ಟಿ ಶಿಕ್ಷಕರು ಸ್ವಾಗತಿಸಿದರು.
ಎಂ.ಜಿ.ಪುರದಣ್ಣವರ ಪ್ರಭಾರಿ ಮುಖ್ಯ ಗುರುಗಳು ಪ್ರಾಸ್ತಾವಿಕ ನುಡಿಗಳನ್ನಾಡಿದರು
ಡಿ.ಎಚ್.ಮಾಳಗೌಡರ ಗುರುಮಾತೆಯರು ವಾರ್ಷಿಕ ವರದಿ ಓದಿದರು.
ಕಳೆದ ಸಾಲಿನ ಏಳನೇ ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಹಾಗೂ ಅಥಿತಿಗಳನ್ನು ಸನ್ಮಾನಿಸಲಾಯಿತು . ಕುಮಾರಿ ನರ್ಮದಾ ಮಡಿವಾಳ ಮತ್ತು ದೀಪ ಬುಕ್ಕಿಟ್ಗಾರ ಮತ್ತು ಒಂದರಿಂದ ಏಳನೇ ತರಗತಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಪುಸ್ತಕಗಳನ್ನ ಹಾಗೂ ಪೆನ್ನುಗಳನ್ನು ನೀಡಿ ಸತ್ಕರಿಸಲಾಯಿತು.
ವಿ. ಎಲ್. ಪಾಟೀಲ ಗುರುಮಾತೆಯರು ಮತ್ತು ಅಂಬಿಕಾ ಕಾತರಕಿ ಗುರುಮಾತೆಯರು ಕಾರ್ಯಕ್ರಮ ನಿರೂಪಿಸಿದರು.
ಆರ್ ಬಿ ಸವಾರ ಶಿಕ್ಷಕರು ಪ್ರಶಸ್ತಿ ವಿತರಣೆಯನ್ನು ನಡೆಸಿಕೊಟ್ಟರು.
ಮೋಹನ ಬಂಡಿ ಶಿಕ್ಷಕರು ವಂದಿಸಿದರು.
ಶಿವಪ್ಪ ಚಲವಾದಿ ಶಿಕ್ಷಕರು ಮಕ್ಕಳಿಗೆ ವಿಶೇಷ ನ್ರತ್ಯದ ತರಬೇತಿ ನೀಡಿ ಯಶಸ್ವಿಗೊಳಿಸಿದರು. ಮಕ್ಕಳು ಮಹಿಳೆಯರು ಸೇರಿದಂತೆ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!