ಪಟ್ಟಣಕ್ಕೆ ಇಬ್ಬರು ಹಿಂದೂ ಫೈರ್ ಬ್ರಾಂಡ್ ಗಳ ಆಗಮನ.
ಗುರುಮಠಕಲ್: ಛತ್ರಪತಿ ಶಿವಾಜಿ ಮಹಾರಾಜರ 396 ನೇಯ ಜಯಂತಿಯ ಅಂಗವಾಗಿ ಪಟ್ಟಣದಲ್ಲಿ ಇಂದು ಭವ್ಯ ಮೆರವಣಿಗೆಯನ್ನು ಯುವ ಘರ್ಜನೆ ವೇದಿಕೆ ಮುಖಾಂತರ ಆಯೋಜಿಸಲಾಗಿದೆ.
ಇಂದಿನ ಈ ಕಾರ್ಯಕ್ರಮಕ್ಕೆ ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಹೈದರಾಬಾದ್ ರೆಫ್ಲೆಕ್ಷನ್ ಗ್ರೂಪ್ ಸಿಇಓ ಅಮೋಘ ದೇಶಪತಿ ಆಗಮಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಯಿಂದ ಪ್ರಮುಖ ರಸ್ತೆಯ ಮುಖಾಂತರ ಮೆರವಣಿಗೆ ತದ ನಂತರ 6 ಗಂಟೆಯಿಂದ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಿಂದೂ ಯುವ ಘರ್ಜನೆ ವೇದಿಕೆ ಅಧ್ಯಕ್ಷ ವೆಂಕಟೇಶ್ ಮುದಿರಾಜ್ ತಿಳಿಸಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ




















