ನಿನ್ನ ಮರೆತಂತೆ ಹೇಗೆ ಬದುಕಲಿ ನಾನು
ನನ್ನ ಬಿಟ್ಟು ದೂರ ಹೋಗದಿರು ನೀನು!
ಈ ಹೃದಯದ ಗೂಡಿಗೆ ರಾಣಿಯು ನೀನು
ನನ್ನ ಬಾಳು ಬೆಳಗುವ ಜ್ಯೋತಿಯು ನೀನು!!
ನೀ ಬರುವ ಮುಂಚೆ ಬರಿ ನೋವಲ್ಲೆ ಬೆಂದಿದೆ
ಸುತ್ತೆಲ್ಲ ಕತ್ತಲು ನನ್ನನ್ನೇ ಕವಿದು ಆವರಿಸಿದೆ!
ಒಡೆದೋದ ಮನಸ್ಸಿನ ಕನ್ನಡಿಯು ನಾನಾದೆ
ಆ ಕನ್ನಡಿ ಜೋಡಿಸುವ ಮದ್ದು ನೀನಾದೆ!!
ಮೋಸ ಜನರ ಪೆಟ್ಟು ನನ್ನ ಕುರುಡು ಮಾಡಿದೆ
ಬರಿ ಕಲ್ಲು ಮುಳ್ಳಿನ ದಾರಿಯಲಿ ನಡೆದಾಡಿದೆ!
ಯಾರಿರದ ಒಂಟಿ ಬದುಕಿಗೆ ಸದ್ದಿಲ್ಲದೆ ಬಂದೆ
ಕವಿದ ಕುರುಡು ಮದದ ಪೊರೆಯ ಬಿಡಿಸಿದೆ!!
ಯಾರೂ ಕೊಡದ ಪ್ರೀತಿ ಸ್ನೇಹ ನಿನ್ನಲ್ಲಿ ಕಂಡೆ
ಸುಖ ದುಃಖವನ್ನೆಲ್ಲ ನಾ ನಿನ್ನಲ್ಲಿ ಹಂಚಿಕೊಂಡೆ!
ಒಬ್ಬಂಟಿಯ ಕೊರಗಿಗೆ ಜೀವ ತುಂಬಿದೆ
ಒಲ್ಲದ ಮನಸಿಗೆ ತುಂಬಾ ಹತ್ತಿರವಾದೆ!!
ನನ್ನೆಲ್ಲ ಕನಸುಗಳಿಗೆ ಹೆಗಲಾಗಿ ನೀ ಬಂದೆ
ಕಣ್ಣು ಮುಚ್ಚಲಾರೆ ನಗು ಪಿಸುಮಾತು ನೆನಪಾಗಿದೆ!
ಎರಡು ದೇಹ ಒಂದು ಜೀವ ಹೇಗೆ ಮರೆಯುವುದೇ
ನಿನ್ನ ಮುಖವು ನೋಡುವ ಆಸೆಯಾಗಿದೆ!!
- ಕೆ. ಎಂ. ಕಾವ್ಯ ಪ್ರಸಾದ್, ಚಿಕ್ಕಬಳ್ಳಾಪುರ ಜಿಲ್ಲೆ.




















