ಪುಣ್ಯ ಸ್ಥಳಗಳಾದ ಪವಿತ್ರ ಧ್ಯಾನ ಬಂಡೆ, ಧ್ಯಾನ ಮಂದಿರ ದರ್ಶನ ನೀಡಲು ವಿಜಯ್ ಕುಮಾರ್ ನೀರೆಟಿ ಆಗ್ರಹ.
ಯಾದಗಿರಿ/ ಗುರುಮಠಕಲ್: ಫೆಬ್ರುವರಿ 27 ರಿಂದ ಮಾರ್ಚ್ ತಿಂಗಳ 3ರವರೆಗೆ ನಡೆಯಲಿರುವ ಅಮ್ಮನ 6ನೇ ಅವತಾರೋತ್ಸವ ಕಾರ್ಯಕ್ರಮದಲ್ಲಿ ಅಮ್ಮನವರು ಧ್ಯಾನಮಾಡಿರುವ ಬಂಡೆ, ಧ್ಯಾನ ಮಂದಿರವನ್ನು ಭಕ್ತರಿಗೆ ದರ್ಶನ ಕಲ್ಪಿಸಲು ಟ್ರಸ್ಟ್ ಮಂಡಳಿ ವ್ಯವಸ್ಥೆ ಮಾಡಬೇಕು ಎಂದು ವಿಜಯ ಕುಮಾರ್ ನೀರೆಟಿ ಮಾಜಿ ಕಾಡಾ ಅಧ್ಯಕ್ಷರು ಟ್ರಸ್ಟ್ ಸದಸ್ಯರಿಗೆ ಒತ್ತಾಯಿಸಿದ್ದಾರೆ.
70 ವರ್ಷಗಳಿಂದ ಅಮ್ಮವರು ಪ್ರತಿದಿನ ಧ್ಯಾನ ಮಾಡುತ್ತಿದ್ದರೆಂದು ನಂಬಲಾಗಿರುವ ಪವಿತ್ರ ಬಂಡೆಯ ಸ್ಥಳವನ್ನು ಭಕ್ತರಿಗೆ ಅಧಿಕೃತವಾಗಿ ತೋರಿಸಬೇಕು ಎಂಬ ಮನವಿ ಕೇಳಿ ಬಂದಿದೆ. “ಆ ಪವಿತ್ರ ಸ್ಥಳ ಎಲ್ಲಿದೆ? ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ?” ಎಂಬ ಅನುಮಾನಗಳಿಗೆ ಟ್ರಸ್ಟ್ ಉತ್ತರಿಸಬೇಕೆಂದು ಆಗ್ರಹಿಸಲಾಗಿದೆ.
BOX
ಪ್ರಮುಖ ಬೇಡಿಕೆಗಳು:
✅ ಅಮ್ಮನ ಧ್ಯಾನದ ಬಂಡೆಯನ್ನು ಐತಿಹಾಸಿಕ ಪವಿತ್ರ ಸ್ಥಳವಾಗಿ ಘೋಷಿಸಬೇಕು.
✅ ಅಮ್ಮನ ಧ್ಯಾನ ಮಂದಿರವನ್ನು ಸಂರಕ್ಷಿತ ಸ್ಮಾರಕವಾಗಿ ಪರಿಗಣಿಸಬೇಕು.
✅ ಅಮ್ಮನವರು ಭಕ್ತರಿಗೆ ಆಶೀರ್ವಾದ ಮಾಡುತ್ತಿದ್ದ ಸಭಾಂಗಣಕ್ಕೆ ಐತಿಹಾಸಿಕ ಸ್ಥಾನಮಾನ ನೀಡಬೇಕು. ಹಾಗೆಯೇ ಮಂತ್ರಾಲಯಂ ಸಮೀಪದ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನನಲ್ಲಿ ಭಕ್ತರು ಪಾದರಕ್ಷೆಗಳ ದರ್ಶನ ಮಾಡುವಂತೆ, ಸೂರ್ಯ ನಂದಿ ಕ್ಷೇತ್ರ ಯಾನಗುಂದಿ ಬೆಟ್ಟದ ಮೇಲಿರುವ ಅಮ್ಮನ ಧ್ಯಾನ ಬಂಡೆಯನ್ನೂ ಅಧಿಕೃತವಾಗಿ ಘೋಷಿಸಿ ಭಕ್ತರಿಗೆ ದರ್ಶನಕ್ಕೆ ಮುಕ್ತಗೊಳಿಸಬೇಕು ಎಂದು ಟ್ರಸ್ಟ್ ಸದಸ್ಯರಿಗೆ ಒತ್ತಾಯಿಸಿದ್ದಾರೆ.
BOX
ಸ್ಥಳೀಯ ಅಮ್ಮನವರ ಭಕ್ತರ ಅಭಿಪ್ರಾಯ :
“ಅಮ್ಮವರು ಪ್ರತಿದಿನ ಇಲ್ಲಿ ಧ್ಯಾನಬಂಡೆಯ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದರು. ಧ್ಯಾನ ಮಂದಿರ ಮತ್ತು ಸಭಾಂಗಣದಲ್ಲಿ ಭಕ್ತರಿಗೆ ಆಶೀರ್ವಾದ ನೀಡುತ್ತಿದ್ದರು. ಈ ಸ್ಥಳಗಳು ಇತಿಹಾಸದಲ್ಲಿ ದಾಖಲಾಗಬೇಕು.
ಅವತಾರೋತ್ಸವಕ್ಕೆ ಬರುವ ಪ್ರತಿಯೊಬ್ಬ ಭಕ್ತರೂ ಈ ಪವಿತ್ರ ಸ್ಥಳಗಳನ್ನು ನೋಡಿ ಧನ್ಯರಾಗಬೇಕು ಎಂಬುದು ಸ್ಥಳೀಯರ ಹಾಗೂ ಯಾನಗುಂದಿ ಬೆಟ್ಟದ ಭಕ್ತರ ಆಶಯವಾಗಿದೆ ಈ ಕುರಿತು ಭಕ್ತರಿಗೆ ಆದಷ್ಟು ಬೇಗ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ



















