ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆರೋಗ್ಯ ತಪಾಸಣೆ, ರಕ್ತದಾನ, ಅಂಗಾಂಗ ದಾನ ನೋಂದಣಿ ಶಿಬಿರ

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಪಟ್ಟಣದ ಕ್ರಿಸ್ತ ಜ್ಯೋತಿ ಶಾಲೆಯಲ್ಲಿ ನಡೆದ ಆರೋಗ್ಯ ತಪಾಸಣೆ, ರಕ್ತದಾನ, ಅಂಗಾಂಗ ದಾನಗಳ ನೋಂದಣಿ ಶಿಬಿರವನ್ನು ಅರಕಲಗೂಡು ತಾಲೂಕು ವೈದ್ಯಾಧಿಕಾರಿ ಡಾ. ಪುಷ್ಪಲತಾ ರವರು ಹಾಗೂ ಕ್ರಿಸ್ತ ಜ್ಯೋತಿ ಶಾಲೆಯ ಮುಖ್ಯ ಶಿಕ್ಷಕರಾದ ಸೆಬಾಸ್ಟಿಯನ್ ಪಿ ಜೆ ಉದ್ಘಾಟಿಸಿದರು.

ಮನುಷ್ಯನಿಗೆ ಆರೋಗ್ಯವೇ ಸಂಪತ್ತಾಗಿರಬೇಕು ಆದ ಕಾರಣ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ಎಲ್ಲಾ ವಯಸ್ಸಿನವರು ಕೂಡ ಕಂಡುಕೊಳ್ಳಬೇಕು ಈ ನಿಟ್ಟಿನಲ್ಲಿ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳುವುದು ಅವಶ್ಯವಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಪುಷ್ಪಾಲತ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ಆಸ್ಪತ್ರೆ ಹಾಸನ ಎಂ ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಅಮ್ಮ ಕಣ್ಣಿನ ಆಸ್ಪತ್ರೆ, ರಕ್ತ ನಿಧಿ ಹಮ್ಮಿಕೊಂಡಿದ್ದು ಆರೋಗ್ಯ ತಪಾಸಣೆ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು. ಎಲ್ಲಾ ಶಾಲೆಗಳಿಗೂ ಕಾಲೇಜುಗಳಿಗೂ ಮಕ್ಕಳ ಆರೋಗ್ಯ ತಪಾಸಣೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದರು. ಈ ಹಂತದಲ್ಲಿ ಮಕ್ಕಳಲ್ಲಿ ಕಂಡು ಬರುವ ಅನಾರೋಗ್ಯ ಸಮಸ್ಯೆಗೆ ಆರಂಭದಲ್ಲೇ ಚಿಕಿತ್ಸೆ ನೀಡಿ ಗುಣಪಡಿಸಲು ಸಹಕಾರಿಯಾಗಲಿದೆ ಅಲ್ಲದೆ ಇಲ್ಲಿ ಹೆಚ್ಚು ವಿದ್ಯಾರ್ಥಿಗಳ ಪೋಷಕರು ತಪಾಸಣೆಗೆ ಒಳಪಟ್ಟಿದ್ದು ಅವರಿಗೂ ಉಪಯುಕ್ತವಾಗಿದೆ ಎಂದು ತಿಳಿಸಿದರು.
ಮಕ್ಕಳ ತಜ್ಞರಾದ ಡಾಕ್ಟರ್ ಮಂಜುನಾಥ್ ಮಾತಾಡಿ ಮಕ್ಕಳನ್ನು ಮೊಬೈಲ್ ನಿಂದ ಸಂಪೂರ್ಣ ದೂರವಿಡಬೇಕಿದೆ ಬೆಳೆಯುವ ಮಕ್ಕಳಿಗೆ ಹೆಚ್ಚು ಪೋಷಕಾಂಶ ಯುದ್ಧ ಆಹಾರ ಪದಾರ್ಥಗಳು ನೀಡಬೇಕಾಗಿದೆ ಅವರ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಲಿದೆ. ಕ್ರಿಸ್ತ ಜ್ಯೋತಿ ಶಾಲೆಯ ಪ್ರಾಂಶುಪಾಲರಾದ ರೆ. ಫಾ. ಸೆಬಾಸ್ಟಿಯನ್ ಪಿ.ಜೆ ಮಾತನಾಡಿ ಕಳೆದ ನಾಲ್ಕೈದು ವರ್ಷಗಳಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಗ್ರಾಮೀಣ ಪ್ರದೇಶಗಳಲ್ಲಿ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ವಿದ್ಯಾರ್ಥಿಗಳ ಪೋಷಕರಿಗೆ ಸೇವೆ ಸಲ್ಲಿಸಲಾಗುತ್ತಿದೆ ಹಿರಿಯ ಪತ್ರಕರ್ತರಾದ ಶಂಕರ್ ಅವರು ವರ್ತಕ ಲೋಕೇಶ್ ಉದ್ದಿಮೆ ಕುಮಾರ್ ಪೋಷಕರು ರಕ್ತದಾನ ಮಾಡಿದರು. ವಿಶೇಷವಾಗಿ ಶಾಲೆಯ ಶಿಕ್ಷಕಿ ಚಂದ್ರಕಲಾ ಸಂಪೂರ್ಣ ದೇಹ ದಾನ ಮಾಡಲು ಮತ್ತು 50 ಮಂದಿ ಅಂಗಾಂಗ ದಾನ ಮಾಡಲು ನೊಂದಣಿ ಮಾಡಿದ್ದಾರೆ ಎಂದು ತಿಳಿಸಿದರು. ಶಿಬಿರದಲ್ಲಿ 60 ಯೂನಿಟ್ ರಕ್ತ ಸಂಗ್ರಹ 200 ಮಂದಿ ಕಣ್ಣಿನ ಪರೀಕ್ಷೆ 150 ಮಂದಿ ಮೂಳೆ ತಜ್ಞರ ಸಲಹೆ 125 ಮಂದಿ ಜನರಲ್ ತಪಾಸಣೆ 108 ಮಂದಿ ಸ್ತ್ರೀರೋಗ ತಪಾಸಣೆ 235 ಮಂದಿಗೆ ರಕ್ತದ ಗುಂಪು ತಪಾಸಣೆಗೆ ಒಳಗಾದರು.

ವರದಿ. ಸುಧೀಂದ್ರ ಡಿ ಅರಕಲಗೂಡು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!