ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಂಜಾರ ಸಮುದಾಯ ವತಿಯಿಂದ ಸಂತ ಸೇವಾಲಾಲ್ ಜಯಂತಿ ಆಚರಣೆ ಕಾರ್ಯಕ್ರಮ ಇಷ್ಟೊಂದು ವಿಜೃಂಭಣೆಯಿಂದ ಆಚರಣೆ ಮಾಡುತ್ತಿರುವುದು ಅತ್ಯಂತ ತುಂಬಾ ಖುಷಿ ಕೊಟ್ಟಿದೆ. ಎಂದು ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು.
ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳ ಬಂಜಾರ ಸೇವಾ ಸಂಘಗಳ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ 287 ನೇ ಜಯಂತಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಜಯಂತಿ ಮೂಲಕ ನೀವೆಲ್ಲರೂ ಸಹ ಸಂಘಟನೆಯಾಗುತ್ತಿದ್ದು ಇದರ ಮೂಲಕ ತಮ್ಮ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡಂತಾಗಿದೆ.
ಸಂಘಟನೆ ಮೂಲಕ ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ತಾವೆಲ್ಲರೂ ಸಹ ಒಳ್ಳೆಯ ಸಂದೇಶವನ್ನು ಸಮಾಜಕ್ಕೆ ಕೊಟ್ಟಿದ್ದೀರಿ ಮುಂದಿನ ದಿನಗಳಲ್ಲಿ ನಿಮ್ಮ ತಾಂಡಾಗಳಿಗೆ ಆಗಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ನಾನು ಸದಾ ಮುಂದಿರುತ್ತೇನೆ. ಜೊತೆಗೆ ನೀವು ಕೊಟ್ಟಿರುವ ಮನವಿಯನ್ನು ಸಹ ಆದಷ್ಟು ಬೇಗ ಪೂರೈಕೆ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಶಿಕ್ಷಣ ಕೊಡಿಸಿ : ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರು ಬಂದಿರುವುದರಿಂದ ತಾವು ದಯವಿಟ್ಟು ಎಷ್ಟೆ ಕಷ್ಟ ಬಂದರು ಸಹ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ. ನೀವು ಪಟ್ಟ ಕಷ್ಟಗಳನ್ನು ಅವರು ಪಡಬಾರದು ಎಂಬ ಉದ್ದೇಶ ಇಟ್ಟುಕೊಂಡು ತಾವು ಏನು ಗುರಿ ಕಟ್ಟುಕೊಂಡಿದ್ದೀರಾ ಅದಕ್ಕೆ ತಕ್ಕಂತೆ ಉನ್ನತ ಶಿಕ್ಷಣ ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸಲು ನಾನು ಸಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಈಗಾಗಲೇ ನಾನು ಕುಡಿಯುವ ನೀರಿನ ವಿಷಯಕ್ಕೆ ಸಂಬಂಧ ಪಟ್ಟಂತೆ ಸಾಕಷ್ಟು ಅನುದಾನ ಬೇಕಿದೆ. ಸುಮಾರು 490 ಕೋಟಿ ಅನುದಾನ ಬೇಕಿದೆ ಒಂದು ವೇಳೆ ಅಷ್ಟು ಅನುದಾನ ಬಜೆಟ್ ನಲ್ಲಿ ಬಿಡುಗಡೆಯಾದರೆ ನಮ್ಮ ಭಾಗಕ್ಕೆ ನೀರಿನ ಕೊರತೆ ಇರುವುದಿಲ್ಲ ಎಂದರು.
ದಾವಣಗೆರೆಯ ಸರ್ದಾರ್ ಸೇವಾಲಾಲ್ ಸೈನಾ ಭಗತ್ ಸ್ವಾಮಿಗಳು ಮಂಜು ಮಹಾರಾಜ್ ಸ್ವಾಮಿಗಳು ಮಾಜಿ ಶಾಸಕರಾದ ನಂಜುಂಡಸ್ವಾಮಿ ನರೇಂದ್ರ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದತ್ತೇಶ್ ಕುಮಾರ್, ಬಿಗ್ ಬಾಸ್ ವಿಜೇತ ಹನುಮಂತ, ಬಂಜಾರ ಸೇವಾ ಸಂಘದ ಅಧ್ಯಕ್ಷರಾದ ಶಾಂತರಾಜು, ರಾಷ್ಟ್ರೀಯ ಬಂಜಾರ ಸೇವಾ ಸಂಘ ರಾಜ್ಯಧ್ಯಕ್ಷರಾದ ವಿಜಯ್ ಕುಮಾರ್, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಚಾಮುಲ್ ನಿರ್ದೇಶಕರಾದ ಉದ್ದನೂರು ಪ್ರಸಾದ್, ಶಾಹುಲ್ ಅಹಮ್ಮದ್, ಕಾನೂನು ವಿಭಾಗದ ಕಾರ್ಯಧ್ಯಕ್ಷರಾದ ಅನಂತ್ ನಾಯಕ್, ಹನೂರು ತಾಲೂಕು ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಬಾಲರಾಜ್ ಗಾಯಕ ರಮೇಶ್ ಲಮಾಣಿ ಮುಖಂಡರುಗಳಾದ ಮಹದೇವ, ಗುರು ದಕ್ಷಿಣಮೂರ್ತಿ ರಾಜು ದೀಪು ಸತ್ಯರಾಜು ಚಂದ್ರ ನಾಯಕ ಹಾಗೂ ಇನ್ನಿತರ ಮುಖಂಡರುಗಳು ಇದ್ದರು.
ವರದಿ : ಉಸ್ಮಾನ್ ಖಾನ್




















