ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ಸಣಾಪುರ ಗ್ರಾಮದ ಆರಾಧ್ಯ ದೈವ ಉದ್ಭವ ವೀರಭದ್ರೇಶ್ವರ ಸ್ವಾಮಿಯ ಜಾತ್ರಾಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಮಹಾದಾಸೋಹಿ ಕಲಬುರಗಿಯ ಶರಣಬಸವೇಶ್ವರರ ಪುರಾಣ ಪ್ರವಚನದ ಮಹಾಮಂಗಲ ಸಮಾರಂಭದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ನ್ಯಾಯಾಧೀಶರಾಗಿ ಆಯ್ಕೆಯಾದ ಸಂತೋಷ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಹೆಬ್ಬಾಳದ ಶಿವಪ್ರಕಾಶ ಶರಣರು, ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಕರಿಸಿದ್ದೇಶ್ವರ ವಿಶ್ವಾರಾಧ್ಯ ಶ್ರೀಗಳು, ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ರು ಹಾಗೂ ಅಫೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಮುಷ್ಟೂರು ಚನ್ನಪ್ಪ, ಚಲನಚಿತ್ರ ನಿರ್ದೇಶಕ ಆದಿತ್ಯ ಚಿಕ್ಕಣ್ಣ, ಜಿ.ಈಶಪ್ಪ, ಟಿ.ಶರಣಪ್ಪ, ಕುಮಾರಸ್ವಾಮಿ, ದೊಡ್ಡಬಸಪ್ಪ, ಕನಕಗಿರಿ ರೇಣುಕಗೌಡ, ಟಿ.ವೀರನಗೌಡ, ಕನಕಗಿರಿ ಬಸವರಾಜ, ಕೆ.ಮರಿಶಾಂತ ಸೇರಿದಂತೆ ಭಕ್ತರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















