ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹರಿದಾಸ ಸಂಸ್ಕೃತಿ ಸೇವೆಯಲ್ಲಿ ಮಿಂದೆದ್ದ ಕಲಾವಿದ ಮಲ್ಲಪ್ಪ ಪೂಜಾರಿ.

ಕಲೆಯನ್ನು ಕಾಯಕ ಮಾಡಿಕೊಂಡ ಕಲಾವಿದ ಮಲ್ಲಪ್ಪ

ಬಾಗಲಕೋಟೆ -ಮುಧೋಳ ಮೆಟ್ಟಿ ಪುಣ್ಯ ಕ್ಷೇತ್ರವನ್ನು ಸುಟ್ಟು ಹೋಗ್ವದಯ್ಯ ಪಾಪ. ಮುಟ್ಟಿ ಭಜಿಸಿರಯ್ಯಾ ನಮ್ಮ ಪುರಂದರ ವಿಠಲನ ಎಂದು ಎಂದು ಬೆಳಗಿನ ಸಮಯದಲ್ಲಿ ಪಾಂಡುರಂಗ ವಿಠಲನ ಭಜಿಸುತ್ತಾ ಮುಧೋಳ ತಾಲೂಕಿನ ಮೆಳ್ಳಿಗೇರಿಯ ಬಲಭೀಮನ ಹಾಗೂ ಸತ್ಯವತಿ ದೇವಿಯ [ಸತ್ಯಮ್ಮ] ಪೂಜೆಯ ಗೈಯುತ್ತಾ ಭಕ್ತಿ ಪರಂಪರೆಯ ಕಹಳೆ ಊದಿ ಹರಿಹರರಲ್ಲಿ ಭೇದವಿಲ್ಲದೆ ಸದಾ ಭಕ್ತಿ ಸೇವೆಯಲ್ಲಿ ಮಿಂದೆದ್ದ ಹಿರಿಯ ಜೀವ ಮಲ್ಲಪ್ಪ ಫಕೀರಪ್ಪ ಪೂಜಾರಿ ಹಳೆಯ ತಲೆಮಾರಿನ ಕಲಾವಿದ. ಇವರು ಮೂಲತಃ ಹುನಗುಂದ ತಾಲೂಕಿನ ಇಸ್ಲಾಂಪುರ ಗ್ರಾಮದ ಬಡ ಕುಟುಂಬವೊಂದರಲ್ಲಿ 01/06/1954‌ರಲ್ಲಿ ಜನಿಸಿದ ಇವರು ಬಾಲ್ಯದಲ್ಲಿ ರಂಗಭೂಮಿ ಪ್ರವೇಶಿಸಿ ಹಲವು ಸಾಮಾಜಿಕ ನಾಟಕಗಳಲ್ಲಿ ಸ್ತ್ರೀ – ಪುರುಷ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡವರು.
ಅದರಲ್ಲಿ “ಸತಿ ಸರಸ್ವತಿ ” ನಾಟಕದಲ್ಲಿ ಸರಸ್ವತಿ ಪಾತ್ರಕ್ಕೆ ಜೀವ ತುಂಬಿದ ಮಲ್ಲಪ್ಪ ಪೂಜಾರಿ ಪ್ರೇಕ್ಷಕರಿಂದ ಚಪ್ಪಾಳೆಗಿಟ್ಟಿಸಿಕೊಂಡವರು.
ನಂತರದಲ್ಲಿ ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮಕ್ಕೆ ಬಂದು ಖಾಯಂ ವಾಸ ಮಾಡಿದ ಇವರು ಅಲ್ಲಲ್ಲಿ ನಡೆಯುವ ಹರಿಪಂಥದ ದಿಂಡಿ-ಉತ್ಸವಗಳಲ್ಲಿ ಭಾಗವಹಿಸಿ ಅಭಂಗ, ಭಜನೆ ಪದಗಳನ್ನು ಹೇಳಿ ಜನಮೆಚ್ಚುಗೆ ಪಡೆದ ಮಲ್ಲಪ್ಪ ಶ್ರೀ ಮನ್ ನಿಜಗುಣ ಶಿವಯೋಗಿಗಳ, ಸಫ೯ಭೂಷಣರ, ಮಹಾಲಿಂಗರಂಗರ, ಪುರಂದರ ದಾಸರ, ಕನಕದಾಸರ ಪದಗಳನ್ನು ನಿರಗ೯ಳವಾಗಿ ಹಾಡವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಮಲ್ಲಪ್ಪ ತಮ್ಮ ಸಂತ ಜೀವನದಲ್ಲಿ ಕಲೆಯನ್ನು ಕಾಯಕ ಮಾಡಿಕೊಡು ಅವಿಶ್ರಾಂತವಾಗಿ ಕಲಾಸೇವೆಯನ್ನು ಮುಂದುವರಿಸಿದರು. ಸುಮಾರು 60 ವರ್ಷಕ್ಕೂ ಹೆಚ್ಚು ಕಾಲ ಕಲೆಗಾಗಿ ಅರ್ಪಣೆಯನ್ನು ಮಾಡಿಕೊಂಡಿದ್ದ ಇವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಅಭಿನಂದಿಸಿವೆ. 70 ವರ್ಷಗಳನ್ನು ದಾಟಿದ ಈ ಹಿರಿಯ ಕಲಾ ಜೀವಿಗೆ ಇನ್ನೂ ಸರ್ಕಾರದ ಯಾವುದೇ ಮಾಶಾಸನಗಳಾಗಲಿ ಗೌರವಗಳಾಗಲಿ ಸಿಗದೇ ಇರುವುದು ನೋವಿನ ಸಂಗತಿ. ಈಗಲಾದರೂ ಕರ್ನಾಟಕ ಘನ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸಿ ಮಾಶಾಸನವನ್ನು ನೀಡುವಂತಾಗಲಿ ಎಂದು ಕನಾ೯ಟಕ ರಾಜ್ಯ ಸವ೯ಕಲಾವಿದರ ಒಕ್ಕೂಟದ ಒತ್ತಾಸೆಯಾಗಿದೆ.

  • ಶರಣಬಸವ ಶಾಸ್ತ್ರಿಗಳು ಶ್ರೀ ಸಿದ್ಧಾರೂಢ ಭಾರತಿ ಆಶ್ರಮ ಮುಗಳಖೋಡ 587113.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!