ಹುಬ್ಬಳ್ಳಿ : ಇಂದು ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದಿಂದ ಶಾಸಕರಾದ ಶ್ರೀ ಮಹೇಶ್ ತೆಂಗಿನಕಾಯಿ ಅವರಿಗೆ ಬೈಕ್ ಟ್ಯಾಕ್ಸಿ, ರಿಯಾಪಿಡ್ ಕರ್ನಾಟಕದಲ್ಲಿ ಮುಂದುವರಿಯಬಾರದು ಎಂದು ಮನವಿ ನೀಡಲಾಯಿತು.
ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಕುಟುಂಬಕ್ಕೆ ಮತ್ತು ಆಟೋ ಚಾಲಕರಿಗೆ ವಿವಿಧ ಬೇಡಿಕೆಗಳು :
ಮೊದಲಿಗೆ ರಾಜ್ಯಾದ್ಯಂತ app ಮುಖಾಂತರ ಓಡಾಡುತ್ತಿರುವ ಬೈಕ್ ಟ್ಯಾಕ್ಸಿಗಳು ಬಂದ್ ಆಗಬೇಕು,
ಆಟೋ ಚಾಲಕರ ನಿಗಮ ಮಾಡಿದ ಮಂಡಳಿಗೆ ಬಜೆಟ್ಟಿನಲ್ಲಿ ಐದು ನೂರು ಕೋಟಿ ಮೀಸಲಿಡಬೇಕು.
ಆಟೋ ಚಾಲಕರು ಅಪಘಾತ ಹೊಂದಿದಾಗ ಎಲ್ ಎಂ ಇ ಎನ್ ಟಿ ಬ್ಯಾಡ್ಜ್ ಮೂರು ಹೊಂದಿದವರಿಗೆ ಪರಿಹಾರ ನೀಡಬೇಕು.
ನಮ್ಮ ಬಡ ಆಟೋ ಚಾಲಕರಿಗೆ ಪ್ರತ್ಯೇಕ ಮನೆಗಳನ್ನು ಮಾಡಿ ಒಂದು ಕಾಲೋನಿ ನಿರ್ಮಾಣ ಮಾಡಿಕೊಡಬೇಕು
ಎನ್ನುವುದು ಸೇರಿದಂತೆ ಇನ್ನೂ ಅನೇಕ ಬೇಡಿಕೆಗಳ ಮನವಿ ಪತ್ರವನ್ನು ಶಾಸಕರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಶೇಖರಯ್ಯ ಮಠಪತಿ, ಮುರಳಿ ಇಂಗಳಹಳ್ಳಿ, ದಾವಲ್ ಸಾಬ್ ಕೊರಟ್ಟಿ, ಗುರು ಬೆಟಗೇರಿ, ರಾಜೇಶ್ ಬಿಜ್ವಾಡ್, ಶಬ್ಬೀರ್ ಜಮೀನ್ದಾರ್, ಪವನ್ ಹಾವಣಿಗೆ, ನಿಂಗಪ್ಪ ಗೋರಕ್ನವರ್ ಸೇರಿದಂತೆ ನೂರಾರು ಆಟೋ ಚಾಲಕರು ಸಂಘದ ಅಧ್ಯಕ್ಷರು,ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ ಸುನಿಲ್ ಪಿ. ಸಜ್ಜನ್




















