ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಾಳಿನ ಬೆಳಕು

ಗೌರವಿಸಿ ಆಕೆಯನ್ನು
ಸೀರೆಯೊಳಗಿರಲಿ
ಅವಳು ಬುರ್ಖಾದೊಳಗಿರಲಿ
ಅಥವಾ ತುಂಡು ಬಟ್ಟೆಯೊಳಗಿರಲಿ
ಹೆಣ್ಣು ಹೆಣ್ಣೇ…
ನೆನಪಿರಲಿ
ಅವಳಿಗೊಂದು ಮನವಿದೆ
ಅವಳದೇ ಆದ ಆಸೆಗಳಿವೆ, ನೋವುಗಳಿವೆ

ಬೋಗದ ವಸ್ತುವಲ್ಲ ಆಕೆ
ನಿನ್ನ ಅಗತ್ಯಗಳ ಪೂರೈಸುವ ಸೇವಕಿಯಲ್ಲ
ಕೇವಲ ಹೆರುವ ಯಂತ್ರವೂ ಅಲ್ಲವಾಕೆ….
ಅರ್ಥವ ನೀಡಿಹಳು ನಿನ್ನ ಬದುಕಿಗೆ
ಊರುಗೋಲಾಗಿಹಳು
ಬೆಳಗುವ ನಿನ್ನ ವಂಶದ ದೀಪದಮಲ್ಲಿ
ಜವಾಬ್ದಾರಿಯ ಹೊರೆಯ ಹೊತ್ತಿಹಳು ನೋಡಿಲ್ಲಿ

ಹೆಣೆಯದಿರಿ
ಅವಳ ಸುತ್ತಲೂ ನೂರು ಬಲೆಯ
ಸೀಮಿತವಲ್ಲವಾಕೆ ಕೇವಲ ಕೆಲಸಕೆ
ಎಂದೂ ಮುಗಿಯದಿಹ ನಿನ್ನ ಸ್ವಾರ್ಥಕೆ
ರೆಕ್ಕೆಯ ಹಚ್ಚು ಅವಳ ಕನಸಿಗೂ
ಒಡೆಯನಾಗುವೆ ಆಗ ಮನಸಿಗೂ

ಹಾರುವ ಹಕ್ಕಿಗೆ ಪಂಜರದ ಹಂಗೇಕೆ
ಹಾಡುವ ಕಂಠಕೆ ತಡೆಯೇಕೆ
ಹೆಣ್ಣು ಗಂಡೆಂಬ ಭೇದವ ತೊರೆ ಮನವೆ
ಮೆಟ್ಟಿಲಾಗು ಅವಳ ಕನಸಿನ ಲೋಕಕೆ
ನೀನೇ ಅರಸನಾಗುವೆ  
ಅವಳೊಲುಮೆಯ ಅರಮನೆಗೆ

-ರಶ್ಮಿ ಶಮಂತ್, ಹೊಸನಗರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!