ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕುಡಿಯುವ ನೀರಿನ ಕೆರೆ ಪ್ರಾರಂಭ

ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಕದಡಿ ಗ್ರಾಮದಲ್ಲಿ
ಎಸ್.ಕೆ.ಡಿ.ಆರ್.ಪಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಹಕಾರದೊಂದಿಗೆ, ಕದಡಿಯ ಹೊರವಲಯದಲ್ಲಿ ಬೃಹತ್ ಪ್ರಮಾಣದ ಕುಡಿಯುವ ನೀರಿನ ಕೆರೆಯನ್ನು ಪ್ರಾರಂಭಿಸಿದ್ದು ಈ ಕಾರ್ಯಕ್ರಮದಲ್ಲಿ ನರಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ, ಸನ್ಮಾನ್ಯ ಬಿ ಆರ್ ಯಾವಗಲ್ ಮಾತನಾಡಿದರು. ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಸಮಾಜಕ್ಕೆ ಉತ್ತಮ ಕೊಡೆಗೆಗಳು ಒದಗಿದ್ದು, ಬಹಳ ವರ್ಷಗಳಿಂದ ಉತ್ತಮ ಸಮಾಜ ಕಟ್ಟುವಲ್ಲಿ ಬಹಳಷ್ಟು ಸಹಕಾರಿಯಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕರ್ತವ್ಯವನ್ನು ಮಾಡುತ್ತಾ ಬಂದಿದೆ, ಈಗ ಕದಡಿ ಗ್ರಾಮದ ಈ ಬೃಹತ್ ಕೆರೆಯ ಕಾಮಗಾರಿಯಿಂದ, ಊರಿನ ಜನಕ್ಕೆ ಸಮೃದ್ಧಿಯಾಗಿ ನೀರು ಸಿಗುತ್ತದೆ ಎಂದು ಈ ಕಾರ್ಯಕ್ರಮ ಉದ್ದೇಶಿಸಿ ಶ್ರೀ ಬಿ ಆರ್ ಯಾವಗಲ್ ಅವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅಭಿನಂದನೆಯನ್ನು ಸಲ್ಲಿಸಿದರು.
ಜೊತೆಗೆ ಈ ಕಾರ್ಯಕ್ರಮದಲ್ಲಿ ಕದಡಿ ಗ್ರಾಮ ಪಂಚಾಯತಿಯ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ಶ್ರೀ ರುದ್ರಪ್ಪ ಅಡಿಗಿಮನಿ, ಶ್ರೀ ವಿ ಆರ್ ಗೋಜನೂರ್, ಮತ್ತು ಕದಡಿ ಗ್ರಾಮದ ಪ್ರಮುಖರಾದ, ಶ್ರೀ ಬಸವರಾಜ್ ಶಿರೂರು, ಶ್ರೀ ಕಳಕಪ್ಪ ಇಟಗಿ, ಶ್ರೀ ಮಹೇಶಗೌಡ ಚಿಕ್ಕನಗೌಡ್ರ ಹಾಗೂ ಕದಡಿ ಗ್ರಾಮದ ಯುವಕರು ಮತ್ತು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ ವಿನೋದರಾಜ್ ಹೂಗಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!