ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಜರುಗುವಂತೆ ಈ ವರ್ಷವೂ 11 ದಿನಗಳ ಕಾಲ ಹುಬ್ಬಳ್ಳಿಯ ಸಿದ್ದರೂಢ ಪುರಾಣ ಕಾರ್ಯಕ್ರಮ ಜರುಗಿತು. ಈ ದಿವಸ ಬೆಳಗ್ಗೆಯಿಂದ ಶ್ರೀಶರಣಬಸವೇಶ್ವರ ದೇವರಿಗೆ ಪೂಜಾ ಪುಷ್ಪಾಲಂಕಾರ , ಹೋಮ ಜರುಗಿದವು.
ವಧುವರರನ್ನು ಗಂಗೆಯಿಂದ ಕುಂಭ, ಕಳಸ , ಡೊಳ್ಳು , ಸಕಲವಾದ್ಯಗಳಿಂದ ಡಣಾಪುರ ರಾಜಬೀದಿಯಲ್ಲಿ ಮೆರವಣಿಗೆಯೊಂದಿಗೆ ಡಣಾಪುರ ಶ್ರೀಶರಣಬಸವೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ಗ್ರಾಮದ ಸಮೂಹದಲ್ಲಿ ಮೂರು ನವಜೋಡಿಗಳ ನವ ಜೀವನಕ್ಕೆ ಕಾಲಿಟ್ಟರು. ನಂತರ ಧರ್ಮಸಭೆ ಶ್ರೀಗಳ ಆಶೀರ್ವಚನ ಹಾಗೂ ಕಲ್ಲಯ್ಯ ಅಜ್ಜರ ತುಲಾಭಾರ ಡಣಾಪೂರ ಗ್ರಾಮದ ಚೌವ್ಹಾಣ ಕುಟುಂಬದಿಂದ ಜರುಗಿತು.
ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.
ಈ ಕಾರ್ಯಕ್ರಮದಲ್ಲಿ ಬುಕ್ಕಸಾಗರ ಕರಿಸಿದ್ದೇಶ್ವರ ಶ್ರೀಗಳು ಅಯೋಧ್ಯ, ಹಾಲಗಂಗಾಧರ ಸ್ವಾಮಿಗಳು, ತಿರುಪತೆಪ್ಪ ತಾತನವರು ನಂದೆಳ್ಳಿ , ರೇವಣ ಸಿದ್ದಯ್ಯತಾತ ಹಾಗೂ ಗ್ರಾಮದ ಹಿರಿಯರಾದ ಸಿ ಎಚ್ ಮಲ್ಲನಗೌಡ , ಬಿ ಫಕೀರಪ್ಪ ,ಈ ಚಿದಾನಂದಪ್ಪ , ಟಿ ನಾಗಪ್ಪ , ಈರಪ್ಪ , ಹೆಚ್ ಮಂಜುನಾಥ್ , ಎಂ ಪಿ ಪಂಪನಗೌಡ ಸಿ ಎಚ್ ವಿರುಪಾಕ್ಷಗೌಡ , ಪಿಪಿ ಶರಣೆಗೌಡ ಹಾಗೂ ಬಿ ದೊಡ್ಡನಗೌಡ , ಸಿಎಚ್ ಶೇಖರಗೌಡ , ಸಿಎಚ್ ರುದ್ರಗೌಡ ಕೆ ಚೆನ್ನಯ್ಯಸ್ವಾಮಿ ,ಹಾವುನಗೌಡ್ರು , ಹನುಮೇಶ , ರಾಘವೇಂದ್ರ, ವೀರನಾಗಪ್ಪ ಸೇರಿದಂತೆ ಭಕ್ತಾದಿಗಳು ಭಾಗಿ ಇದ್ದರು.
- ಕರುನಾಡ ಕಂದ ಪತ್ರಿಕೆ



















