ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಹಿಳೆ ಎಂದರೆ ಕೇವಲ ಒಂದು ವ್ಯಕ್ತಿಯಲ್ಲ : ಸಮಾಜ ಸುಧಾರಕ ಅಬ್ದುಲ್ ನಬಿ

ಸಿರುಗುಪ್ಪ – ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಳ್ಳುವುದು ಪ್ರಶ್ನೆ ಮಾಡುವ ಮತ್ತು ಬದಲಾವಣೆಗೆ ಒಡ್ಡಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನಬದ್ಧ ಮೂಲಭೂತ ಕರ್ತವ್ಯ ಎಂದು ರಾಷ್ಟ್ರೀಯ ಸಾಕ್ಷರತಾ ಲೋಕ ಶಿಕ್ಷಣ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಸದಸ್ಯರು ಸಮಾಜ ಸುಧಾರಕ ಅಬ್ದುಲ್ ನಬಿ ಅವರು ಹೇಳಿದರು. ಸಿರುಗುಪ್ಪ ನಗರದ ಇಬ್ರಾಹಿಂ ಮಂಜಲ್ ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಇಂಟರ್ ನ್ಯಾಷನಲ್ ವುಮೆನ್ಸ್ ಡೇ ದಿನವನ್ನು ನೆನಪಿಸಿ ಸರ್ವರಿಗೂ ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರೀತಿಯ ಶುಭಾಶಯಗಳು ಹಾರೈಸಿ ಮಾತನಾಡುತ್ತಾ ಒಂದು ಸಮಾಜ ಎಷ್ಟು ಅಭಿವೃದ್ಧಿ ಬಂದಿದೆ ಎಂಬುದನ್ನು ಅಳೆಯಬೇಕಾದರೆ ಅಲ್ಲಿ ಮಹಿಳೆಗೆ ದೊರೆಯುವ ಗೌರವ ಮತ್ತು ಸುರಕ್ಷತೆಯನ್ನು ನೋಡಿ ಎಂಬ ಮಾತು ಅತ್ಯಂತ ಅರ್ಥಪೂರ್ಣವಾಗಿದೆ ಮಹಿಳೆ ಎಂದರೆ ಕೇವಲ ಒಂದು ವ್ಯಕ್ತಿಯಲ್ಲ ಮಹಿಳೆ ಒಂದು ಸಂಸ್ಕೃತಿ ಒಂದು ಕುಟುಂಬದ ನೆಲೆ ಒಂದು ಸಮಾಜದ ಅಸ್ತಿತ್ವದ ಸಂಕೇತ ಮಹಿಳೆಯರ ಹಕ್ಕುಗಳು ಸಾಧನೆಗಳು ಮತ್ತು ಸ್ವಾತಂತ್ರ್ಯದ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತವೆ ಆದರೆ ಮಹಿಳೆಯ ಗೌರವವು ಕೇವಲ ಒಂದು ದಿನದ ಆಚರಣೆ ಎಲ್ಲಾ ಅದು ಪ್ರತಿದಿನದ ಬದುಕಿನಲ್ಲಿ ಪ್ರತಿಫಲಿಸಬೇಕು ಒಂದು ಮನೆಯಲ್ಲಿನ ತಾಯಿ ಹೆಂಡತಿ ಅಕ್ಕ ಅಥವಾ ತಂಗಿ ಇವರಿಲ್ಲದೆ ಆ ಮನೆ ಸಂಸಾರವೆಂದು ಅನಿಸುವುದೇ ಇಲ್ಲ ಕುಟುಂಬವನ್ನು ಒಗ್ಗೂಡಿಸಿ ಮಕ್ಕಳ ಭವಿಷ್ಯವನ್ನು ರೂಪಿಸಿ ಸಂಕಷ್ಟಗಳನ್ನು ಧೈರ್ಯದಿಂದ ನಿಲ್ಲುವ ಶಕ್ತಿ ಮಹಿಳೆಯಲ್ಲಿದೆ ಗಂಡ ಸತ್ತರೆ ಮಹಿಳೆ ಮಗುವಿಗೆ ತಾಯಿಯು ಆಗಿ ತಂದೆಯು ಆಗಿ ಬದುಕನ್ನು ಸಾಗಿಸಬಲ್ಲಳು ಆದರೆ ಹೆಂಡತಿ ಇಲ್ಲದಿದ್ದರೆ ಗಂಡನಿಗೆ ಆ ಎರಡು ಪಾತ್ರಗಳನ್ನು ಸಂಪೂರ್ಣವಾಗಿ ನಿಭಾಯಿಸುವುದು ಬಹಳ ಕಷ್ಟ ಆದ್ದರಿಂದ ಮಹಿಳೆಯನ್ನು ಪುರುಷರಿಗೆ ಸಮಾನಳು ಎನ್ನುವುದಕ್ಕಿಂತ ಹಲವಾರು ಸಂದರ್ಭಗಳಲ್ಲಿ ಪುರುಷರಿಗಿಂತಲೂ ಹೆಚ್ಚು ಸಮರ್ಥಳು ಎಂದು ಹೇಳಬಹುದು ಜೀವನದ ಸಂಕಷ್ಟಗಳನ್ನು ಎದುರಿಸುವ ಧೈರ್ಯವು ಮಹಿಳೆಯಲ್ಲಿದೆ ಮಹಿಳೆಯ ಧೈರ್ಯ ಮತ್ತು ಹೊಣೆಗಾರಿಕೆಯ ಪ್ರತೀಕವಾಗಿದೆ ಮಹಿಳೆಯರಿಗೆ ಮುಂದೆ ಸಾಗಲು ಅಡ್ಡಿಯಾಗಬೇಡಿ ಮಹಿಳೆಯ ಗೌರವ ಸುರಕ್ಷತೆ ಸಮಾನ ಅವಕಾಶಗಳು ದೊರಕಿದಾಗ ಮಾತ್ರ ಸಮಾಜದ ನಿಜವಾದ ಅಭಿವೃದ್ಧಿ ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ವಿವರಿಸಿ ಹೇಳಿದರು.

ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!