
ಬಳ್ಳಾರಿ / ಕಂಪ್ಲಿ :ಪವಿತ್ರ ರಮಜಾನ್ ಮಾಸಾಚರಣೆ ಪ್ರಯುಕ್ತ ಐದು ವರ್ಷದ ಸೈಯದ್ ಮೊಹಮ್ಮದ್ ಸಮೀ ಹಾಗೂ ಏಳು ವರ್ಷದ ಸೈಯದ್ ಮೊಹಮ್ಮದ್ ಸಾಕಿಬ್ ತಂದೆ ಸೈಯದ್ ಸಾಧಿಕ್ ಅಲಿ ರವರ ಪುಟ್ಟ ಬಾಲಕರು ಶನಿವಾರದಂದು ಮೊದಲನೆಯ ಬಾರಿಗೆ ಒಂದು ಉಪವಾಸ (ವ್ರತ, ರೋಜಾ) ಆಚರಿಸುವುದರ ಮೂಲಕ ಹೆಮ್ಮೆ ಮತ್ತು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಈ ಪುಟ್ಟ ಬಾಲಕರು ಕಂಪ್ಲಿ ಪಟ್ಟಣದ 18ನೇ ವಾರ್ಡ್, ಮುಲ್ಲಾರ ಓಣಿ/ಸುಣಗಾರ ಓಣಿಯ ಮುಲ್ಲಾ ಮೊಹಲ್ಲಾದ ಪೇಶ್ ಇಮಾಮ್ ಹಾಜಿ ಜಿಯಾವುದ್ದಿನ್ ಸಾಹೇಬ್ ರವರ ಮೊಮ್ಮಕ್ಕಳಾಗಿದ್ದಾರೆ.
ಸೈಯದ್ ಮೊಹಮ್ಮದ್ ಸಾಕಿಬ್ ಮತ್ತು ಸೈಯದ್ ಮೊಹಮ್ಮದ್ ಸಮೀ ಎಂಬ ಪುಟ್ಟ ಬಾಲಕರು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ರಮಜಾನ್ ತಿಂಗಳ ಕಠಿಣ ಉಪವಾಸ ವ್ರತವನ್ನು ಪೂರ್ಣಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಧಾರ್ಮಿಕ ಶ್ರದ್ದೆ ಮತ್ತು ಕುಟುಂಬದ ಪ್ರೇರಣೆಯಿಂದ ಇವರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಆಹಾರ ಮತ್ತು ನೀರನ್ನು ತ್ಯಜಿಸಿ ವ್ರತ ಆಚರಿಸುವ ಮೂಲಕ ಧೈರ್ಯ ಪ್ರದರ್ಶಿಸಿದ್ದಾರೆ.
ಬೆಳಗಿನ ಜಾವ 5-30 ರಿಂದ ಸಂಜೆ 6-30ರ ವರೆಗೆ ಸುಮಾರು 13 ತಾಸಿನ ಉಪವಾಸ ಆಚರಣೆಯನ್ನು ಮಾಡಿ ಧಾರ್ಮಿಕ ಶ್ರದ್ಧೆ ಮತ್ತು ಕುಟುಂಬದ ಪ್ರೇರಣೆಯಿಂದ ಈ ಬಾಲಕರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಆಹಾರ ಮತ್ತು ನೀರನ್ನು ತ್ಯಜಿಸಿ ವ್ರತ ಆಚರಿಸುವ ಮೂಲಕ ಧೈರ್ಯ ಪ್ರದರ್ಶಿಸಿದ್ದಾಳೆ.
ಬೆಳಗಿನ ಜಾವ 5-30 ರಿಂದ ಸಂಜೆ 6-30ರ ವರೆಗೆ ಸುಮಾರು 13 ತಾಸಿನ ಉಪವಾಸ ಆಚರಣೆಯನ್ನು ಮೊದಲನೆಯ ಬಾರಿಗೆ ಆಚರಿಸಿ ತನ್ನ ಮೊದಲನೇ ಉಪವಾಸ ರೋಜಾ ಪೂರ್ಣಗೊಳಿಸಿರುತ್ತಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇವರು ತೋರಿದ ಶಿಸ್ತು ಮತ್ತು ಭಕ್ತಿಯನ್ನು ಕಂಡು ಸ್ಥಳೀಯ ಸಮುದಾಯದಲ್ಲಿ ಅವರ ಮನೆಯ ಎಲ್ಲಾ ಕುಟುಂಬದವರು, ಬಂಧುಗಳು ಸೇರಿದಂತೆ ಅನೇಕರು ಶ್ಲಾಘಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















