ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಹಿಳೆಯರು ಮಾನಸಿಕ ಪ್ರಭುದ್ಧತೆ ಬೆಳೆಸಿಕೊಳ್ಳಿ: ಬಾಲನಾಗಮ್ಮ

ಕೊಪ್ಪಳ: ಮಹಿಳೆಯರು ಮಾನಸಿಕ ಪ್ರಭುದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದು
ಕೊಪ್ಪಳದ ಶ್ರೀಶೈಲಾ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀ ಮತಿ ಬಾಲನಾಗಮ್ಮ ಅವರು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರದಂದು ಕಾಲೇಜಿನ ಮಹಿಳಾ ಸಬಲೀಕರಣ ಘಟಕ ಮತ್ತು ಅಜಿಮ್ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಮಹಿಳೆಯರು ಕಾನೂನುಗಳನ್ನು ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಮಹಿಳೆಯರು ಕೆಲವು ಸಮಯದಲ್ಲಿ ಆವೇಶದಿಂದ ಹಲವು ತಪ್ಪುಗಳನ್ನು ಮಾಡುತ್ತಿದ್ದಾರೆ. ಎಲ್ಲರಿಗೂ ಆಲಿಸುವ ಮತ್ತು ಕೇಳಿಸಿಕೊಳ್ಳುವ ಗುಣ ಇರಬೇಕು. ಪೂರ್ಣವಾಗಿ ಕೇಳಿಸಿಕೊಳ್ಳುವುದರಿಂದ ಜೀವನದ ಹಲವು ಸಮಸ್ಯೆಗಳು ಬಗೆಹರಿಯುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿರುವ ಕಾಮನೂರು ಆಸ್ಪತ್ರೆಯ ವೈದ್ಯೆ ಡಾ. ಕವಿತಾ ಹ್ಯಾಟಿ ಅವರು ಮಾತನಾಡುತ್ತಾ ಹೆಚ್ಚಿನ ಮಹಿಳೆಯರು ರಕ್ತಹೀನತೆಯಿಂದ ನರುಳುತ್ತಿದ್ದಾರೆ. ಮಹಿಳೆಯರು ಆರೋಗ್ಯವಾಗಿದ್ದರೆ ಮಾತ್ರ ಇಡೀ ಸಮಾಜ ಆರೋಗ್ಯವಾಗಿರುತ್ತದೆ. ಪೌಷ್ಟಿಕಾವಾದ ಆಹಾರ ಸೇವನೆ ಮಾಡಬೇಕು. ಕೆಮಿಕಲ್ ಭರಿತ ಸೌಂದರ್ಯ ವಸ್ತುಗಳನ್ನು ಬಳಸಿಬೇಡಿ ಎಂದು ತಿಳಿಸುತ್ತ ಮಹಿಳೆಯರ ಆರೋಗ್ಯದ ಕುರಿತು ವಿವರಿಸಿದರು.
ಕಾರ್ಯಕ್ರಮ ಸಂಯೋಜಕಿ ಮತ್ತು ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ಸಂಚಾಲಕರಾದ ಶ್ರೀ ಮತಿ ನಾಗರತ್ನ ತಮ್ಮಿನಾಳ ಅವರು ಮಾತನಾಡುತ್ತ ನಮ್ಮ ಕಾರ್ಯಕ್ರಮಗಳು ಕಾರ್ಯರೂಪಕ್ಕೆ ತರಬೇಕು. ಮಹಿಳೆಯರು ಧೈರ್ಯವಾಗಿ ಶಿಕ್ಷಣ ಪಡೆಯಬೇಕು. ಕುಟುಂಬದ ನಿರ್ವಹಣೆಗೆ ಮಹಿಳೆಯರು ಪುರುಷರಷ್ಟೇ ಆರ್ಥಿಕವಾಗಿ ಬೆಂಬಲ ನೀಡುತ್ತಿದ್ದಾರೆ. ವೇತನದಲ್ಲಿ ತಾರತಮ್ಯ ಇದೆ. ಸಮಾನ ವೇತನ ಇಲ್ಲ ಎಂದು ಹೇಳುತ್ತಾ ಮಹಿಳಾ ದಿನಾಚರಣೆಯ ಹಿನ್ನಲೆ ಮತ್ತು ಇತಿಹಾಸವನ್ನು ವಿವರಿಸಿದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗವಿಸಿದ್ದಪ್ಪ ಮುತ್ತಾಳ ಅವರು ಮಾತನಾಡುತ್ತ ಮಹಿಳೆಯರು ತಮ್ಮ ಹಕ್ಕುಗಳನ್ನು ಚಲಾಯಿಸಬೇಕು. ಸ್ತ್ರೀಯರನ್ನು ಲಿಂಗ ತಾರತಮ್ಯ ಮಾಡುತ್ತಿದ್ದೇವೆ. ಡಾ. ಬಿ. ಆರ್ ಅಂಬೇಡ್ಕರ್ ಅವರು ಮಹಿಳೆಯರ ಅಸ್ತಿ ಮತ್ತು ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಾರೆ. ಸಂವಿಧಾನದ ಮೂಲಕ ಇಂದು ಮಹಿಳೆಯರು ಉತ್ತಮವಾದ ಜೀವನ ಮಾಡುತ್ತಿದ್ದಾರೆ. ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಮತ್ತು ಸಮಾನತೆಗಾಗಿ ಶಿಕ್ಷಣ ಪಡೆದು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ವಿಟೋಬ ಅವರು ಮಾತನಾಡುತ್ತಾ ಶಿಕ್ಷಣದಿಂದ ಮಾತ್ರ ಜಾತೀಯತೆ , ಮೂಢನಂಬಿಕೆ, ಅಜ್ಞಾನಗಳನ್ನು ಹೋಗಲಾಡಿಸಬಹುದು. ಸಾವಿತ್ರಿ ಬಾ ಪುಲೆ ಅವರು ಮಹಿಳೆಯರಗಾಗಿ ಶಾಲೆಗಳನ್ನು ಪ್ರಾರಂಭ ಮಾಡಿದರು. ಶಿಕ್ಷಣದ ಮೂಲಕ
ಮಹಿಳೆಯರು ಕಾನೂನುಗಳ ಕುರಿತು ತಿಳಿದುಕೊಳ್ಳಬೇಕು. ಮಹಿಳೆಯರು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಆಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ಭೋಧಕರಾದ ಡಾ. ಪ್ರದೀಪ್ ಕುಮಾರ್ ಅವರು ಮಾತನಾಡುತ್ತ ಇಂದು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಮಹಿಳೆಯರಿಗೆ ಉದ್ಯೋಗದ ಅವಕಾಶಗಳು ಜಾಸ್ತಿ ಇವೆ. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ತಿಳಿಸಿದರು.
ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಶ್ರೀ ಮತಿ ಸುಮಯ್ಯ ಅವರು ಮಾತನಾಡುತ್ತ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕೊಡಬೇಕು. ವಿಕಲಚೇತನ ಮಹಿಳೆಯರಿಗೆ ರಾಜಕೀಯ ಮತ್ತು ಆರ್ಥಿಕವಾಗಿ ವಿಶೇಷ ಸೌಲಭ್ಯಗಳನ್ನು ಮತ್ತು ಗೌರವವನ್ನು ಕೊಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಗಣಪತಿ ಲಮಾಣಿ ಅವರು ಮಾತನಾಡುತ್ತ ಕುಟುಂಬದಲ್ಲಿ ಮಕ್ಕಳು ಚನ್ನಾಗಿ ಬೆಳೆಯಬೇಕಾದರೆ ತಾಯಿಯೇ ಕಾರಣ. ಮನೆ ಸ್ವಚ್ಛ ಇರಬೇಕಾದರೆ ಮಹಿಳೆಯರು ಕಾರಣ. ಪ್ರತಿಯೊಬ್ಬ ಯಶಸ್ವಿ ಪುರುಷರ ಹಿಂದೆ ಮಹಿಳೆಯರು ಇರುತ್ತಾರೆ. ಕುಟುಂಬದಲ್ಲಿ ಮಹಿಳೆಯರನ್ನು ನಿರ್ಲಕ್ಷ್ಯ ಮಾಡಬಾರದು. ಡಾ. ಬಿ. ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮಹಿಳಾ ಪರವಾದ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ನರಸಿಂಹ, ಡಾ. ಶೋಭನ, ಡಾ. ಗೀತಾ ಮುತ್ತಾಳ ಮತ್ತು ಕಾಲೇಜಿನ ಉಪನ್ಯಾಸಕರು ಮತ್ತು ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಹಿನ್ ನಿರೂಪಿಸಿದರು. ನೀಲಗಂಗಮ್ಮ ಸ್ವಾಗತಿಸಿದರು. ಭವ್ಯಾ ಪ್ರಾರ್ಥಿಸಿದರು. ಅಕ್ಷತಾ ವಂದಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!