ವೇಷ ಭಾಷೆ ಬೇರೆಯಾದರೂ
ನಡಿಲೊಮೆಗೆ ಭಾವ ಒಂದೇ
ನಡೆ ನುಡಿ ಬೇರೆಯಾದರೂ
ಗಡಿ ಮೀರಿದ ದೇಶ ಪ್ರೇಮ ಎಂದೂ ಒಂದೇ.
ಹಿಂದೆ ಮುಂದೆ ಎಂದಿಗೂ
ದೇಶಕಾಗಿ ದನಿ ಎತ್ತು
ನಾಡಿಗಾಗಿ ತನುವ ತೆತ್ತು
ದುಡಿಮೆಯಲಿ ಜೀವ ಮಿಡಿತ ಎಂದೂ ಒಂದೇ.
ಕಷ್ಟ ಸಹಿಷ್ಣುತೆ ಕರುಣೆಯಲಿ
ಸೈರಣೆಯ ಮಹೋತ್ಸವ
ಸ್ವಾತಂತ್ರದ ವಿಜಯೋತ್ಸವ
ದಿಗಂತದಿ ಚಾಚಿರುವ ಹೆಮ್ಮೆ ಬಾವುಟ ಒಂದೇ.
ಬಾನೆತ್ತರದಿ ಗಿರಿ ಪರ್ವತ
ಅತ್ತ ಇತ್ತ ಹರಡಿಕೊಂಡ ಕರಾವಳಿಯ
ಹಚ್ಚ ಹಸಿರು ತೋರಣ ಕಟ್ಟಿ
ಧೀರ ಪಯಣ ಬೆಳಕಿನೆಡೆಗೆ ಒಂದೇ.
ಬಾಳುತಿರುವ ಒಂದೇ ತೊಟ್ಟಿಲು
ವಿವಿಧತೆಯಲೂ ಏಕತೆಯ ಸರುತಾ
ಕಡಲಾಚೆಯ ಯಂತ್ರ ಘೋಷದಿ
ಕಣ್ಣುಗಳೆರಡಿರಲೂ ಬೀರುವ ನೋಟ ಎಂದೂ ಒಂದೇ.
ಸೌಹಾರ್ದತೆಯ ನಗೆಯಲಿ
ಧೈರ್ಯ ಭಕ್ತಿ ತುಂಬಿರಲು
ತೋಳ್ಬಲದ ಶಕ್ತಿಯಲಿ
ತ್ಯಾಗ ಬಲಿದಾನ ಪ್ರೇರಣೆಯ ದೇಶ ಪ್ರೇಮ ಎಂದೂ ಒಂದೇ.
- ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು.




















