ಚಿತ್ತಾಪುರ : ತಾಲೂಕಿನ ಸುಗೂರ ಎನ್. ಗ್ರಾಮದಲ್ಲಿ ಇರುವ ಸಚ್ಚಿದಾನಂದ ನಿತ್ಯ ನಿರಂಜನ ಮೂರ್ತಿ ಸ್ವಯಂ ಸಿದ್ಧ ಶರಣ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರರ ಮಂದಿರದ ನೂತನ ಕಟ್ಟಡದ ದಿನಾಂಕ ೮-೪-೨೦೨೬ ರಂದು ಶ್ರೀ ಭೋಜಲಿಂಗೇಶ್ವರ ಶಿಲಾ ಮೂರ್ತಿಯ ಜಲಾಧಿವಾಸ ಕಾರ್ಯಕ್ರಮ ಶ್ರೀಮಠದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ದಿವ್ಯ ನೇತೃತ್ವದಲ್ಲಿ ಜರುಗಿತು. ಮತ್ತು ಮಂಡಲಪೂಜೆ ಮತ್ತು ಹೋಮ ಹವನ ಸಂಜೆ ೭:೩೦ ಕ್ಕೆ ಅನೇಕ ಶಾಸ್ತ್ರಿಗಳ ಸಮ್ಮುಖದಲ್ಲಿ ನಡೆಯಿತು. ಈ ಕುಂಭಮೇಳ ಮೆರವಣಿಗೆ ಕಾರ್ಯಕ್ರಮದ ಅಂಗವಾಗಿ ಬುಧವಾರ ಸುಗೂರ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರ ಮಠದ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಮನೆಯಿಂದ 501 ಕಳಸಗಳ ಪೂರ್ಣ ಕುಂಭಗಳ ಮೆರವಣಿಗೆ ನಡೆಯಿತು. ಕಿರಿಯ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಅಭಿನವ ಡಾ.ಕುಮಾರ ಭೋಜರಾಜರು ಕುಂಭಮೇಳ ಮೆರವಣಿಗೆ ಚಾಲನೆ ನೀಡಿದರು. ಗ್ರಾಮದಲ್ಲಿ ಇರುವ ಪೂಜ್ಯರ ಮನೆಯಿಂದ ದ್ಯಾವಮ್ಮ ದೇವಿಯ ಮಂದಿರದ ರಸ್ತೆಯ ಮೂಲಕ ಪ್ರಾರಂಭವಾದ ಮೆರವಣಿಗೆಯು ಸಕಲ ವಾದ್ಯ ಮೇಳಗಳೊಂದಿಗೆ ಊರಿನ ಪ್ರಮುಖ ಬೀದಿಯ ರಸ್ತೆಯಿಂದ ೧.೩ ಕಿಲೋ ಮೀಟರ್ ವರೆಗೊ ಕಾಲ್ನಡಿಗೆಯಲ್ಲಿ ಮಹಿಳಾ ತಾಯಂದಿರು ಕುಂಭ ಕಳಶ ಹೊತ್ತು ಸದ್ಗುರು ಶ್ರೀ ಭೋಜಲಿಂಗೇಶ್ವರ ಮಂದಿರಕ್ಕೆ ತಲುಪಿತು. ಗ್ರಾಮದಲ್ಲಿನ ಮಹಿಳೆಯರು ಹೊಸಬಟ್ಟೆ ತೊಟ್ಟು, ಆಭರಣಗಳನ್ನು ಧರಿಸಿಕೊಂಡು ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮೆರವಣಿಗೆಯುದ್ದಕ್ಕೂ ಭಕ್ತರು ಸದ್ಗುರು ಶ್ರೀ ಭೋಜಲಿಂಗೇಶ್ವರ ಮಹಾರಾಜ ಕೀ ಜೈ ಎಂದು ಜಯ ಘೋಷಣೆಗಳು ಮುಗಿಲು ಮುಟ್ಟಿದ್ದವು. ಪುರುಷರು ಕೂಡ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಪಟಾಕಿ ಸಿಡಿಸುತ್ತಾ ಉತ್ಸುಕತೆಯಿಂದ ಭಾಗವಹಿಸಿದ್ದು, ಮೆರವಣಿಗೆಗೆ ವಿಶೇಷ ಮೆರಗು ನೀಡಿದರು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ವಿವಿಧ ವೇಷಧಾರಿಗಳ ಡೊಳ್ಳು ಕುಣಿತ. ತಮಟೆಗಳು , ಜನಮನ ಗಮನ ಸೆಳೆದವು. ಈ ಸಂಧರ್ಭದಲ್ಲಿ ಸೋಮಣ್ಣಗೌಡ ತುಮಕೂರು. ಶರಣಗೌಡ ಬೆನಕನಹಳ್ಳಿ. ಭೀಮರೆಡ್ಡಿ ಗೌಡ ಕುರಾಳ, ವಿಶ್ವನಾಥ ರೆಡ್ಡಿ ಪಾಟೀಲ ಸುಗೂರ ಎನ್. ಶರಣಗೌಡ ವಕೀಲರು. ಸಂಗಾರೆಡ್ಡಿ ಮಾಲಿ ಪಾಟೀಲ. ಬಸ್ಸುಗೌಡ ಮಾರಡಗಿ, ಶರಣಗೌಡ ತುಮಕೂರು. ಮಹಿಪಾಲ್ ರೆಡ್ಡಿ ಕರಣಗಿ.ಈರಣ್ಣ ಬಲಕಲ್.ಮಲ್ಲಪ್ಪ ಅರಿಕೇರಿ.ಬಸವರಾಜ ಹಡಪದ ಸುಗೂರ ಎನ್. ಮಲ್ಲಯ್ಯ ಕಸಬಿ.ಮತ್ತು ನರೇಂದ್ರ ಗುತ್ತಿ. ಪ್ರಭು ಹೂಗಾರ. ಶಂಕರಗೌಡ ಮಾಸ್ತರ. ಬಸವರಾಜ ಹವಲ್ದಾರ್, ರಾಮರೆಡ್ಡಿಗೌಡ ಕೊಳ್ಳಿ.ಸುರೇಶ್ ಕೋಟಿಮನಿ, ಮಲ್ಲಿನಾಥ ಚಿನ್ನಾಪೋಟೊ ಸ್ಟುಡಿಯೋ. ಸಿದ್ದುಗೌಡ ಕುರಾಳ. ವಿಶ್ವನಾಥ ಸ್ವಾಮಿ. ಮೋಹನ್ ರಾಠೋಡ್.ರಾಜೇಂದ್ರ ನಾಯ್ಕೊಡಿ. ಸಿದ್ದು ಸಾಹು ಕುಂಬಾರ. ಅಯ್ಯಪ್ಪ ಬೇನಿಗಿಡ. ಯಮನಪ್ಪ ತಳವಾರ. ಸಾಬ್ಬಣ್ಣ ಹಂಗನಹಳ್ಳಿ.ಮರೆಪ್ಪಾ ಬಡಿಗೇರ. ಅನೀಲ ಚವ್ಹಾಣ.ಸೇರಿದಂತೆ ಅನೇಕ ಶ್ರೀ .ಭೋಜಲಿಂಗೇಶ್ವರ ಮಠದ ಸದ್ಬಕ್ತರು, ಸುತ್ತಮುತ್ತಲಿನ ಹಳ್ಳಿಯ ಭಕ್ತರು ಭಾಗವಹಿಸಿದ್ದರು. ಎಂದು ಶ್ರೀಮಠದ ಸಂದ್ಬಕ್ತ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್. ಅವರು ತಿಳಿಸಿದರು.
- ಕರುನಾಡ ಕಂದ ಪತ್ರಿಕೆ




















