ಬಳ್ಳಾರಿ / ಕಂಪ್ಲಿ : ಬಸವಣ್ಣ ಸಾಂಸ್ಕೃತಿಕ ನಾಯಕ. ಸಮಾಜ ಸುಧಾರಕ. ಕ್ರಾಂತಿಕಾರಿ ಹಾಗೂ ಮಹಾಮಾನವತಾವಾದಿ ಮತ್ತು ಶ್ರೇಷ್ಠ ವಚನಕಾರರಾಗಿದ್ದು, ಅವರ ತತ್ವ, ಸಂದೇಶ, ವಿಚಾರಗಳು ನಾಡಿನ ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ ಎಂದು ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ 10ನೇ ವಾರ್ಡಿನ ಬಸವಶ್ರೀ ನಿಲಯದಲ್ಲಿ ಸೋಮವಾರ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ವಚನಗಳು ಇಂದಿಗೂ ಸರ್ವಕಾಲಿಕ. ಸಮಾಜದ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಲು ಅನುಭವ ಮಂಟಪದಲ್ಲಿ ಅಲ್ಲಮಪ್ರಭುದೇವರೊಂದಿಗೆ ಅನೇಕ ಸಂವಾದಗಳ ಮೂಲಕ ಮಾನವೀಯ ಮೌಲ್ಯಗಳ ಕುರಿತು ಚಿಂತನ ಮಾಡಿದ ಶ್ರೇಷ್ಠ ಶರಣ ಬಸವಣ್ಣನಾಗಿದ್ದರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಜೀವನದ ಕಡೆಗೆ ಸಾಗಬೇಕು ಎಂದರು. ಇಲ್ಲಿ ಬಸವಣ್ಣನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಾಲಾರ್ಪಣೆ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತೆ ಆಂಡಿ ಹುಲಿಗೆಮ್ಮ, ರುತಿಕ್ ಹೇಮಂತ್, ದಿಶಾ ಮೋಹನ್ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















