ಬಹೂಪಯೋಗಿ ಗೋಲಾಕಾರದ ಕರ್ಬೂಜ ಹಣ್ಣು
ಬಲು ಆಕರ್ಷಕ ಒಳಗೆ ತುಂಬಿರುವ ಬಂಗಾರದ ಕಣ್ಣು
ಎಲ್ಲರಿಗೂ ಅಚ್ಚುಮೆಚ್ಚು ತಿನ್ನಲು ಈ ಹಣ್ಣು
ನನಗೆ ಪಳೆಯುಳಿಕೆಯ ಮೇಲೆ ಸದಾ ಕಣ್ಣು
ಜೋಡಿಸಲು ಮೂಡಿರುವುದು ಶೋಭಾ ದೀಪ
ಪ್ರಸ್ವಲಿಸುತಿದೆ ಅದರ ಜ್ಯೋತಿಯ ಪ್ರತಾಪ
ಹೊಳೆಯುತಿರುವ ಕ್ರಿಯಾಶೀಲ ಗೂಡುದೀಪ
ನೋಡುಗರಿಗೆ ಇದು ಬಹಳವೆ ಅಪರೂಪ
ನಿತ್ಯದಲಿನ ಸುಲಲಿತ ಚಿತ್ತಾರವ ಬೆಳಗಲು
ಕ್ರಿಯಾಶೀಲ ಕಾವ್ಯೋದಯವ ಹಂಚಿಕೊಳ್ಳಲು
ಬರುತಲಿದೆ ಮನೆ ಮನೆಗೆ ಬೆಳಕ ನೀಡಲು
ಜೊತೆ ಜೊತೆಯಲಿ ತಮಗೆ ಸುಪ್ರಭಾತವ ಹೇಳಲು
- ಲಲಿತಾ ಕೆ ಆಚಾರ್, ಬೆಂಗಳೂರು




















