ತಾಳಿಕೋಟೆ ಪಟ್ಟಣದ ದಿ ಮುಸ್ಲಿಂ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಇದರ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶ್ರೀಮತಿ ಸಕೀನಾಬಿ ಚಂದಸಾಬ ಲಾಹೋರಿ ಅವಿರೋಧವಾಗಿ ಆಯ್ಕೆಯಾದರು. ಶುಕ್ರವಾರ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಈ ಚುನಾವಣೆಯಲ್ಲಿ 12 ಜನ ನಿರ್ದೇಶಕರು ಚುನಾವಣೆ ಸಭೆಯಲ್ಲಿ ಭಾಗವಹಿಸಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಸಕೀನಾಬಿ ಲಾಹೋರಿ ಅವರೊಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ವಿಜಯಕುಮಾರ ಉತ್ನಾಳ ಘೋಷಿಸಿದರು.
ಸಕೀನಾಬಿ ಲಾಹೋರಿ ಅವರ ಆಯ್ಕೆಯ ಘೋಷಣೆ ಆಗುತ್ತಿದ್ದಂತೆಯೇ ಅವರ ಅಪಾರ ಬೆಂಬಲಿಗರು ಬ್ಯಾಂಕಿನ ಅಧ್ಯಕ್ಷ ಮಹಿಬೂಬ ಕೆಂಭಾವಿ ಅವರ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಚಂದಾಹುಸೇನ ಖಾಂಜಾದೆ,ರಫೀಕ ಬೇಪಾರಿ, ತನ್ವೀರ ಮನಗೂಳಿ, ದಾದೆಪೀರ ಚೌದ್ರಿ, ಮುನ್ನಾ ಅರ್ಜುಣಗಿ, ಇಬ್ರಾಹಿಂ ಮನ್ಸೂರ, ಸಿಕಂದರಬಾಷಾ ಡೋಣಿ, ಮಹಮ್ಮದ್ ಆದಾಮ ಅತ್ತಾರ, ಮೊಹಮ್ಮದ್ ಶಫೀಕ ಇನಾಮದಾರ, ಮಾಜಾನಬಿ ಚನ್ನೂರ ಹಾಗೂ ಸಮಾಜದ ಗಣ್ಯರು ಹಿರಿಯರು ಉಪಸ್ಥಿತರಿದ್ದರು.
ವರದಿ ನಜೀರ್ ಚೋರಗಸ್ತಿ, ತಾಳಿಕೋಟೆ




















