ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ಆಸ್ತಿ –ಒಂದು
ಬಹಳ ಜನ ಕೇಳುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ ನಿಮ್ಮ ತಂದೆ ತಾಯಿಗಳು ಅವರ ಜೀವಿತಾವಧಿಯ ನಂತರ ನಿಮಗಾಗಿ ಯಾವ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ ಎಂಬುದು.

ನಾನು ನನ್ನ ತಂದೆತಾಯಿಗಳು ಬಿಟ್ಟುಹೋದ 25 ಆಸ್ತಿಗಳನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ. ಬಹುಶಃ ನನ್ನ ಈ ಉತ್ತರವು ಓದುಗರಿಗೆ ಆಶ್ಚರ್ಯವನ್ನುಂಟು ಮಾಡಬಹುದು.

ಸಾಮಾನ್ಯವಾಗಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಹಣಕಾಸಿನ ಆಸ್ತಿ.
ನಾನು ಮೊದಲು ಹಣಕಾಸಿನ ಆಸ್ತಿಯನ್ನು ಮೊದಲು ವಿಷದೀಕರಿಸಿ ಹಾಗೂ ಉಳಿದ ಆಸ್ತಿಗಳನ್ನು ಬರುವ ಕಂತುಗಳಲ್ಲಿ ವಿವರಿಸುವೆ.

ನನ್ನ ತಂದೆಯವರು ತೀರಿಹೋಗಿ ( 7 ನೇ ಮೇ 1994) ಆರು ತಿಂಗಳು ಆದ ಮೇಲೆ, ಟ್ರಂಕಿನಲ್ಲಿ ಕೆಲ NSC ( ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್) ಗಳು ಸಿಕ್ಕವು. NSC ಗಳ ಒಟ್ಟು ಮೊತ್ತ ರೂಪಾಯಿ 30,000/- ( 30 ಸಾವಿರ) ಆಗಿತ್ತು.

ನಾವು ಉಳಿದ ಮಕ್ಕಳು 6 ಜನ ಆಗಿದ್ದುದರಿಂದ ನಾನು ಆ ಹಣವನ್ನು ಪೋಸ್ಟ್ ಆಫೀಸ್ ನಿಂದ ತೆಗೆದು ಎಲ್ಲರಿಗೂ ರೂಪಾಯಿ 5,000/- ದಂತೆ ಹಂಚಿದೆ. ಆಶ್ಚರ್ಯದ ಸಂಗತಿಯೆಂದರೆ ಮೊದಲು ಎಲ್ಲರೂ ಆ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದರು ಹಾಗೂ ಆ ಹಣವನ್ನು ನಾನೇ ಇಟ್ಟುಕೊಳ್ಳುವಂತೆ ತಿಳಿಸಿದರು ( ನನ್ನ ಅಕ್ಕ ಅಣ್ಣಂದಿರ ಈ ಸ್ವಭಾವವನ್ನು ನನ್ನ ತಂದೆತಾಯಿಗಳು ಬಿಟ್ಟು ಹೋದ ದೊಡ್ಡ ಆಸ್ತಿ ಎಂದು ನಾನು ಪರಿಗಣಿಸುತ್ತೇನೆ) . ಆದರೆ ನಾನು ಎಲ್ಲರಿಗೂ ಬರುವ ಸಮನಾದ ಹಣ ರೂಪಾಯಿ 5,000/- ವನ್ನು ಖುದ್ದಾಗಿ ಎಲ್ಲರಿಗೂ ಸಂದಾಯ ಮಾಡಿದೆ.

ಆಸ್ತಿ 1
ಎಂಥಾ ಗುಣ ನಿಮ್ಮದು….. ನಿಮ್ಮ ಗುಣ ಎಲ್ಲರಿಗಿಂತಲೂ ಶ್ರೇಷ್ಟ. ವಿಶಿಷ್ಟವಾದ ಅಪ್ಪನ ಆಸ್ತಿಯ ಬಗ್ಗೆ ಬರೆದಿರುವಿರಿ. ತುಂಬಾ ಅಭಿಮಾನ ಮೂಡಿತು ನಿಮ್ಮ ಬಗ್ಗೆ.
Mr. Shankar Halagatti
ಅವರ ಮಾತು ಸತ್ಯ ಸರ್.dr Basavaraj Sadar
ಅಲ್ಲವೇ ಮತ್ತೆ. ಇದು ಶ್ರೇಷ್ಠ ಗುಣವೇ ಹೌದು Smt. Ratnamurthy
ತಾವು ತಂದೆಯ ಮೇಲಿಟ್ಟ ಅಭಿಮಾನ, ಜೊತೆಗೆ ಸಾಹಿತ್ಯಾಸಕ್ತಿ ಅಭಿನಂದನೀಯ Mr. Matsendra Joshi.

  • ಪ್ರಮೋದ್ ಕುಲಕರ್ಣಿ, ಬೆಂಗಳೂರು
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!