ತಂದೆ ನೀನು
ಬಂಧು ನೀನು
ಎಂಥ ಭಾಗ್ಯ ತಂದೆ ನೀನು ||
ಬೆಳಕು ನೀನು
ಹೊನಲು ನೀನು
ತಂಗಾಳಿ ಬೀಸುವ ತಂಪು ನೀನು ||ಪ||
ನೆರಳು ನೀನು
ಕರುಳು ನೀನು
ಇರುಳ ಕಳೆವ ದೀಪ ನೀನು ||ಪ||
ಯೋಗಿ ನೀನು
ಎಮ್ಮ ಕಾಯುವವ ನೀನು
ರೋಗ ಹರಿಸುವ ವೈದ್ಯ ನೀನು ||ಪ||
ತೀರ್ಥ ನೀನು
ವಿಷ್ಣು ಪಾದ ನೀನು
ಮೋಕ್ಷ ಪಡೆವ ಪಾದೋದಕ ನೀನು ||ಪ||
ರಚನೆ : ಶ್ರೀನಿವಾಸ ಗಂಗೂರ




















