ಶುಭ ಅರುಣೋದಯದ ಪ್ರಕೃತಿಯ ಸೊಬಗಿನಲಿ
ಕಂಡು ಆಯಿತೆನಗೆ ಬೆರಗು ಒಂದು ಕ್ಷಣದಲಿ
ಹಸಿರಕಾಯಿ ಉದರ ಸೀಳಿ ತೂಗಿತ್ತು ಶ್ವೇತಗರಿ
ಬಣ್ಣಿಸಲು ಅಸದಳ ಅದರ ನಲಿವಿನಾ ಆ ಪರಿ
ಮೆಲ್ಲಹೆಕ್ಕಿ ಇರಿಸಿದೆ ನಿತ್ಯದಾ ಸುಲಲಿತ ಕಟ್ಟೆಯಲಿ
ಸಿಂಗರಿಸಿದೆ ಕತ್ತರಿಸಿದ ದಾಸವಾಳ ತೊಟ್ಟುಗಳಲಿ
ಎಲೆ ಗರಿಗಳ ಅಲ್ಲಲ್ಲಿ ಸೇರಿಸಲು ಆಯಿತು ಚಿತ್ತಾರ
ಕಾವ್ಯವಾಗಿ ಪೋಣಿಸಿದೆ ಪದ ಪುಂಜಗಳಲಿ ಹಾರ
- ಲಲಿತಾ ಕೆ ಆಚಾರ್, ಬೆಂಗಳೂರು




















