ಬಾದಾಮಿ ಪುಷ್ಪಕೆ ಗಸಗಸೆ ಹಣ್ಣಿನ ಕುಸುಮ
ಸುತ್ತ ಜೋಡಣೆಯಲಿ ಅವುಗಳ ಸಂಗಮ
ಪಕ್ಕದಲಿ ಪಪ್ಪಾಯ ಬೀಜಗಳ
ಸಮಾಗಮ
ಅರೆವೃತ್ತದಿ ಸಿಪ್ಪೆಯ ತಿಲಕಗಳ ವಿಗಂಗಮ
ಪೀಠದಲಿ ಆಚೀಚೆ ಹಣ್ಣಿನಾ ಗರಿಗಳು
ಅದರ ತುದಿಯಲಿ ಬಾದಾಮಿ ತಿಲಕಗಳು
ಬುಡದಲಿ ಹರಡಿರುವ ಮಿಶ್ರ ಪಕಳೆಗಳು
ತಮಗಿದುವೆ ಸುಲಲಿತ ಕಾವ್ಯ ಚಿತ್ತಾರದ ಶುಭಾಶಯಗಳು
- ಲಲಿತಾ ಕೆ ಆಚಾರ್, ಬೆಂಗಳೂರು




















