ಕೊಪ್ಪಳ: ಗಂಗಾವತಿ ತಾಲ್ಲೂಕಿನ ಹೊಸಕೇರಾ ಡಗ್ಗಿ ಗ್ರಾಮದ ಸರ್ಕಾರಿ ಆಸ್ಪತ್ರೆ ಮತ್ತು ಎಂ ಎಂ ಜೋಶಿ ದೃಷ್ಟಿ ಕೇಂದ್ರ ಕನಕಗಿರಿ ಹಾಗೂ ಸ್ವಾಮಿ ವಿವೇಕಾನಂದ ಶ್ರೀ ರಾಮನಗರ ಇವರ ಸಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಜರುಗಿತು.
ಈ ಕಾರ್ಯಕ್ರಮದಲ್ಲಿ ಹೊಸಕೇರಾ ಡಗ್ಗಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಆದ ಡಾ. ಫರ್ಜಾನಾ ಜಾಸ್ಮಿನ್ ಮಾತನಾಡಿ ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಎಂ ಎಂ ಜೋಶಿಯವರ ಆಸ್ಪತ್ರೆಯವರು ಉಚಿತವಾಗಿ ಕಣ್ಣಿನ ತಪಾಸಣೆ ಶಿಬಿರವನ್ನು ಏರ್ಪಡಿಸಿದ್ದು ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಬಡ ಜನರಿಗೆ ತುಂಬಾ ಉಪಯುಕ್ತವಾಗಿದೆ ಆದ್ದರಿಂದ ಇದರ ಲಾಭವನ್ನು ಗ್ರಾಮದ ಜನರು ಪಡೆದುಕೊಳ್ಳಿ ಎಂದು ತಿಳಿಸಿದರು. ಹಾಗೆ ಜಿ ರಾಮಕೃಷ್ಣರವರು ಸಾಮಾಜಿಕ ಸೇವೆಯನ್ನು ಸತತ ಸುಮಾರು 30 ವರ್ಷಗಳಿಂದ ಸಾರ್ವಜನಿಕರ ಸೇವೆ ಮಾಡಿಕೊಂಡು ಬಂದಿರುತ್ತಾರೆ ಇವರ ಸೇವೆ ಹೀಗೆ ಮುಂದುವರೆಯಲೆಂದು ತಿಳಿಸಿದರು.
ಈ ಕಾರ್ಯಕ್ರಮ ಮಾತನಾಡಿದ ಸಮಾಜಸೇವಕರಾದ ಹಾಗೂ ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷರಾದ ಶ್ರೀ ಜಿ ರಾಮಕೃಷ್ಣ ಶ್ರೀರಾಮನಗರ ಎಂಎಂ ಜೋಶಿ ದೃಷ್ಟಿ ಕೇಂದ್ರ ಇವರ ಆಶ್ರಯದಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ ಶಿಬಿರವನ್ನು ಏರ್ಪಡಿಸಿದ್ದೇವೆ ಇದರಿಂದ ಬಡ ಜನರಿಗೆ ತುಂಬಾ ಉಪಯುಕ್ತವಾಗಿದೆ ಮತ್ತು ನಾವು ಮಾಡುವ ಸೇವೆಯನ್ನು ಬಡ ಜನರಿಗೆ ತಲುಪುವಂತಾಗುತ್ತೇವೆ ಎಂ ಎಂ ಜೋಶಿ ದೃಷ್ಟಿ ಕೇಂದ್ರ ಇವರು ಸುಮಾರು ಉಚಿತ ಕಣ್ಣಿನ ತಪಾಸಣೆ ಮಾಡಿ ಸುಮಾರು 150 ಜನರಿಗೆ ತಪಾಸಣೆ ಮಾಡಿದರು ಇದರಲ್ಲಿ 50 ಜನರನ್ನು ಆಯ್ಕೆ ಮಾಡಿ ಇವರಿಗೆ ಹುಬ್ಬಳ್ಳಿಯಲ್ಲಿ ಕಣ್ಣಿನ ಆಪರೇಷನ್ ಮಾಡುತ್ತೇವೆ ಮತ್ತು 14 ದುರ್ಮಾಂಸ ಬೆಳೆದಿರುತ್ತವೆ ಈ ಜನರಿಗೆ ಆಪರೇಷನ್ ಮೂಲಕ ಗುಣಪಡಿಸಲಾಗುತ್ತದೆ ಬಡಜನರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಂಎಂ ಜೋಶಿ ದೃಷ್ಟಿ ಕೇಂದ್ರ ಕನಕಗಿರಿಯ ಸಂಯೋಜಕರಾದ ಶರಣಪ್ಪ ಎಸ್.
ಎಂಎಂ ಜೋಶಿ ಆಸ್ಪತ್ರೆಯ ನೇತ್ರ ತಜ್ಞರಾದ ವೆಂಕಟೇಶ ಸೂಜಿ ಸಿಬ್ಬಂದಿಗಳಾದ ಅಂಜಲಿ. ಸುವರ್ಣ. ದೊಡ್ಡಬಸಮ್ಮ. ಭಾಗ್ಯಲಕ್ಷ್ಮಿ. ಆಶಾ ಕಾರ್ಯಕರ್ತಗಳಾದ. ಶಾರದಾ. ದುರುಗಮ್ಮ. ಶಕುಂತಲಾ. ಶೇಖಮ್ಮ ವಿಕಲಚೇತನರ ಸಂಘಟನೆಯ ಅಧ್ಯಕ್ಷರಾದ ಮಂಜುನಾಥ ಹೊಸಕೇರಾ. ಆಸ್ಪತ್ರೆಯ ಸಿಬ್ಬಂದಿಗಳಾದ ಶರಣಪ್ಪ ಇನ್ನು ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
- ಕರುನಾಡ ಕಂದ ಸುದ್ದಿ




















