ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೈತರಿಗೆ ಕೈಬರಹ ಚೀಟಿ ನೀಡಿದ ಟ್ರೇಡರ್ಸ್ ವಿರುದ್ಧ ಕ್ರಮಕ್ಕೆ ವಿಜಯ ಕರುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ರೈತರ ಆಗ್ರಹ

ಬಳ್ಳಾರಿ / ಕಂಪ್ಲಿ : ವೆಂಕಟ ಕೃಷ್ಣ ಟ್ರೇಡರ್ಸ್ ಕಂಪನಿಯಲ್ಲಿ ಗೊಬ್ಬರ ಖರೀದಿಸಿದ ರೈತರಿಗೆ ಬಿಲ್ ನೀಡದೇ ಕೈಬರಹ ಚೀಟಿ ನೀಡಿರುವುದನ್ನು ಖಂಡಿಸಿ, ವಿಜಯ ಕರುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪದಾಧಿಕಾರಿಗಳು, ರೈತರು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಮನವಿ ಪತ್ರ ಸಲ್ಲಿಸಿದರು.
ವಿಜಯ ಕರುನಾಡ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಬಿ. ವಿರುಪಾಕ್ಷ ಯಾದವ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ, “ಗೊಬ್ಬರ ಖರೀದಿಸಿದ ಬಳಿಕ ಬಿಲ್ ಕೇಳಿದಾಗ ಸರಿಯಾದ ಬಿಲ್ ನೀಡದೆ ಕೈಬರಹದ ಚೀಟಿ ನೀಡಿದ್ದಾರೆ. ವ್ಯಾಪಾರಸ್ಥರು ತಮ್ಮ ಇಷ್ಟದಂತೆ ದರ ನಿಗದಿಪಡಿಸಿ ರೈತರನ್ನು ದೋಚುತ್ತಿದ್ದಾರೆ” ಎಂದು ಆರೋಪಿಸಿದರು. ಇದಲ್ಲದೆ, ವಿವಿಧ ಗೊಬ್ಬರ ಮಾರಾಟಗಾರರು ಏಕರೀತಿ ದರ ನಿಗದಿ ಮಾಡದೇ ಮನಬಂದಂತೆ ಹಣ ವಸೂಲಿ ಮಾಡುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಅವರು ದೂರಿದರು.
ಈ ಭಾಗದಲ್ಲಿ ನೀರಿನ ಕೊರತೆಯಿಂದಾಗಿ ರೈತರು ಈಗಾಗಲೇ ಬೆಳೆ ನಷ್ಟ ಅನುಭವಿಸಿ ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲೂ ಕೆಲ ವ್ಯಾಪಾರಸ್ಥರು ಹೆಚ್ಚುವರಿ ದರ ವಸೂಲಿ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ರೈತರು ನೀಡಿದ ದೂರಿನ ಪ್ರಕಾರ, ಶ್ರೀ ವೆಂಕಟ ಕೃಷ್ಣ ಟ್ರೇಡಿಂಗ್ ಕಂಪನಿಯಲ್ಲಿ 11 ಚೀಲ ಕಾಂಪ್ಲೆಕ್ಸ್ 20-20-0-13 ಗೊಬ್ಬರ ಖರೀದಿಸಲಾಗಿದ್ದು, ಒಂದು ಚೀಲದ ಅಧಿಕೃತ ಮುಖಬೆಲೆ ₹1125 ಇರಬೇಕಾದರೆ, ಪ್ರತಿ ಚೀಲಕ್ಕೆ ₹1700 ದರ ನಿಗದಿಪಡಿಸಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಬಿ.ಮಂಜುಳಾ, ಕಂಪ್ಲಿ ತಾಲೂಕು ಗೌರವಾಧ್ಯಕ್ಷ ಎಸ್.ಗೋಪಾಲ ಯಾದವ್, ಅಧ್ಯಕ್ಷ ಜೆ.ಶಿವಕುಮಾರ, ನಗರ ಘಟಕ ಅಧ್ಯಕ್ಷ ಕೆ.ಶಬ್ಬೀರ್,ಉಪಾಧ್ಯಕ್ಷ ವೈ.ಯಲ್ಲಪ್ಪ, ಸಂತೋಷ್, ಮಾಬಾಷಾ, ಹುಲಿಗೆಮ್ಮ ಸೇರಿದಂತೆ ರೈತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!