ನಲಿದಿಹಳು ನಲ್ಲೆ ಕ್ಯಾರೆಟ್ ಶರೀರದ ಚೆಲುವೆ
ನಿಂದಿಹಳು ಗುಲಾಬಿ ಬೊಟ್ಟಿನ ಎಲೆಗಳಾ ನಡುವೆ
ಬಾದಾಮಿ ದಳದ ಹೈ ಹೀಲ್ಡ್ ಪಾದರಕ್ಷೆಗಳ ಧರಿಸಿ
ನೆತ್ತಿಯ ಬುಟ್ಟಿಯಲಿ ಸುಲಲಿತ ಕಾವ್ಯೋದಯವನಿರಿಸಿ
ಬರುತಿಹಳು ಹೇಳಲು ಸನ್ಮನಗಳಿಗೆ ಸುಪ್ರಭಾತವನು
ದಯಮಾಡಿ ಪ್ರತಿಸ್ಪಂದಿಸಿ ಪ್ರೋತ್ಸಾಹಕ ಪ್ರತಿಕ್ರಿಯೆಗಳನು
- ಲಲಿತಾ ಕೆ ಆಚಾರ್, ಬೆಂಗಳೂರು




















