
ಸೋಮವಾರಪೇಟೆ : ನೇಪಾಳದ ಕಟ್ಮಂಡುವಿನಲ್ಲಿ ನಡೆದ ಮೂರನೇ ವಿಶ್ವ ಮಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಕೊಡಗಿನ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಪದಕಗಳನ್ನು ಗೆಲ್ಲುವ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ.

ಈ ಪಂದ್ಯಾವಳಿಯಲ್ಲಿ ಆದಿಗಳಲೆ ಗ್ರಾಮದ
ಪೂವಯ್ಯ ಎ.ಎಸ್ ಹಾಗೂ ಯಶೋಧಾ ರವರ ಮೊಮ್ಮಗ, ಆಶಾ ಡಿ. ಎಸ್. ರವರ ಮಗ ಕುಮಾರ ರಿತನ್ ಡಿ. ಎಸ್. ರವರು ಅದ್ಭುತ ಹೋರಾಟ ನಡೆಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಇವರು ಪಿ.ಎಂ. ಶ್ರೀ ಜಿ.ಎಂ.ಪಿ ಶಾಲೆಯ 6ನೇ
ತರಗತಿ ಸೋಮವಾರಪೇಟೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಊರಿಗೆ ಹಾಗೂ ಶಾಲೆಗೆ ಕೀರ್ತಿ ತಂದಿರುತ್ತಾರೆ.
ವರದಿ: ಪ್ರಿತುನ್ ಪೂವಣ್ಣ




















