ಸಿರುಗುಪ್ಪ / ಸಮೀಪದ ಶಾನವಾಸಪುರದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತಾನಾಡಿದ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಜೆ. ಹುಸೇನ್ ಅವರು ಮಾತನಾಡಿ ಸ್ವಾತಂತ್ರ್ಯ ಬಂದು 80 ವರ್ಷ ಆದರೂ ಸಹಿತ ನಮ್ಮ ಪಾಲಕರು ಖಾಸಗಿ ಶಾಲೆಯತ್ತ ಒಲವು ತೋರಿಸುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ.
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಒಳ್ಳೆಯ ಊಟ, ಬಟ್ಟೆ, ಪುಸ್ತಕ ನೀಡಲಾಗುತ್ತದೆ ಹಾಗಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವುದರ ಮುಖಾಂತರ ಸರ್ಕಾರಿ ಶಾಲೆಗಳ ಗೌರವ ಹೆಚ್ಚಿಸಬೇಕೆಂದು ಪಾಲಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ರಫತ್ ನವಾಜ್, ಪರ್ವೀನ್ ನವಾಜ್, ಅನಿತಾ ಕೃಷ್ಣ,, ಪರ್ವೀನ್ ನಜೀರ್, ಜ್ಯೋತಿ ಮತ್ತು
ಎಸ್ ಡಿ ಎಂ ಸಿ ಅಧ್ಯಕ್ಷರು ಸರ್ವ ಸದಸ್ಯರು. ಊರಿನ ಗುರು ಹಿರಿಯರು. ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಅಲ್ ಜಾಮಿಯಾ ಖಿದ್ ಮತ್ತು ಟ್ರಸ್ಟ್ ನ ಪದಾಧಿಕಾರಿಗಳು ಶಾನವಾಸಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಮಸೀದಿ.ಅಬ್ದುಲ್ ಗೌಸ್, ಸಿರುಗುಪ್ಪ




















