ಚಪ್ಪರಿಸಿ ಸವಿಯಲು ತಂದಿದ್ದ ಅನಾನಸ್ ಹಣ್ಣು
ಕತ್ತರಿಸಿದಾಗ ಆಗಿತ್ತು ಅಂತರಂಗದಲಿ ಹುಣ್ಣು
ಕ್ರಿಯಾಶೀಲ ಚಿಂತನೆಯು ತೆರೆಸಿತ್ತು ಎನ್ನ ಕಣ್ಣು
ದೊಡ್ಡ ಗಾಲಿಯನು ನಿತ್ಯದ ಕಟ್ಟೆಯಲಿ ಇಡಲು
ತ್ರಿಕೋನದ ತುಣುಕುಗಳ ಸುತ್ತಲೂ ಜೋಡಿಸಲು
ಬಾಳೆದಿಂಡು ಬಿಲ್ಲೆಗಳ ಹೂದಳದಿ ಸಿಂಗರಿಸಲು
ಸುತ್ತಿದ್ದ ಬಾಳೆಲೆ ಸುರುಳಿಗಳ ನಡುವೆ ಸೇರಿಸಲು
ಉದಯಿಸಿರುವ ಕಾವ್ಯ ಚಿತ್ತಾರದ ಹೊನಲು
ಇಂದಿನ ಸುಪ್ರಭಾತಕಿದುವೆ ಸಂಚಲನದ ಕಡಲು
- ಲಲಿತಾ ಕೆ ಆಚಾರ್, ಬೆಂಗಳೂರು




















