ಬಳ್ಳಾರಿ / ಕಂಪ್ಲಿ : ತಾಲೂಕು ಸಮೀಪರ ಹೊಸ ದರೋಜಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿ ಅವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಜನ ಸಭೆ ಸೋಮವಾರ ನಡೆಯಿತು.
ಸಂಘದ ಅಧ್ಯಕ್ಷ ಮರಿಸ್ವಾಮಿ ನಾಯಕ ಸಭೆಯ ಅಧ್ಯಕ್ಷತವಹಿಸಿ ಮಾತನಾಡಿ, ಸಂಘವು ರೈತರ, ಸ್ಥಳೀಯ ಮುಖಂಡರ ಸಹಕಾರದ ಜೊತೆಗೆ ಸಂಘದ ಸಿಬ್ಬಂದಿಗಳ ನಿರಂತರ ಪರಿಶ್ರಮವೇ ಅಭಿವೃದ್ಧಿಗೆ ನಾಂದಿಯಾಗಿದೆ ಎಂದರು.
ನಂತರ ಮುಖ್ಯ ಕಾರ್ಯ ನಿರ್ವಾಹಕ ವಿ.ಮಲ್ಲಿಕಾರ್ಜುನ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘದಲ್ಲಿ 4428 ಸದಸ್ಯರಿದ್ದು, 1 ಕೋಟಿ 7 ಲಕ್ಷ 78 ಸಾವಿರ ಠೇವಣಿ ಸಂಗ್ರಹಿಸಿದೆ.
ಕೆಸಿಸಿ ಸಾಲ 437 ಲಕ್ಷ, ಮಧ್ಯಮಾವಧಿ ಸಾಲ 45ಲಕ್ಷ, ಸ್ವಸಹಾಯಕ ಸಂಘಗಳಿಗೆ 14 ಲಕ್ಷ, ಮೀನು ಸಾಕಾಣಿಕೆಗೆ 12 ಲಕ್ಷ ಸೇರಿದಂತೆ ಒಟ್ಟು 708 ಲಕ್ಷ ಸಾಲ ವಿತರಿಸಿದೆ. 2025-26ನೇ ಸಾಲಿನಲ್ಲಿ ಸಂಘವು 7 ಲಕ್ಷ 87 ಸಾವಿರ 971 ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎನ್.ವಿ. ಹನುಮಂತ, ನಿರ್ದೇಶಕರಾದ ಪಿ.ಎಸ್.ಲಿಂಗಪ್ಪ, ಡಿ.ವಿ.ಮಂಜುನಾಥ, ಕೆ.ರಾಮಾಂಜನೇಯ, ಎನ್.ವೆಂಕಟೇಶ, ಡಿ.ಶ್ರೀನಿವಾಸ, ವಲಿ ಮಸೀದಿ, ಹೆಚ್.ದಾನಪ್ಪ, ಕೆ.ತಿಮ್ಮಯ್ಯ, ಟಿ.ಶೋಭಾದೇವಿ, ನಾಗಮ್ಮ, ರಮೇಶ (ಕ್ಷೇತ್ರಾಧಿಕಾರಿ), ಜಿಪಂ ಮಾಜಿ ಸದಸ್ಯ ವಿ.ಜನಾರ್ದನ, ತಾ.ಪಂ. ಮಾಜಿ ಉಪಾಧ್ಯಕ್ಷ ಮಾದಾಪುರ ಮಾರಪ್ಪ, ಮುಖಂಡರಾದ ಟಿ.ರಸೂಲ್ ಸಾಬ್, ಮಜ್ಜಿಗೆ ನಾಗಪ್ಪ ಸೇರಿದಂತೆ ರೈತರು, ಸಿಬ್ಬಂದಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















