ವಿರಾಜಪೇಟೆ: ವಿಧಾನ ಸೌಧದಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರನ್ನು ಭೇಟಿ ಮಾಡಿ ದಿನಾಂಕ: 04-10-2026 ರಂದು ಕೊಡಗು ಗೌಡ ಸಮಾಜ ಸಭಾಂಗಣ, ಉಳ್ಳಾಲು, ಬೆಂಗಳೂರಿನಲ್ಲಿ ಏರ್ಪಡಿಸಿರುವ ಕೈಲ್ ಮುಹೂರ್ತ ಜಂಬರ -2026ರ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಕೊಡಗು ಗೌಡ ಸಮಾಜ (ರಿ.) ಬೆಂಗಳೂರು ಅಧ್ಯಕ್ಷರಾದ ವಿಂಗ್ ಕಮಾಂಡರ್ ಶ್ರೀ ಅಯ್ಯಟೀರ ಮನೋಜ್ ಕುಮಾರ್, ಉಪಾಧ್ಯಕ್ಷರಾದ ಶ್ರೀ ಕುದುಪಜೆ ಮೋಹನ್, ಗೌರವ ಕಾರ್ಯದರ್ಶಿಗಳಾದ ಬೇಕಲ್ ಬಿಪಿನ್, ಜಂಟಿ ಕಾರ್ಯದರ್ಶಿಗಳಾದ ಶ್ರೀ ಗೋವಿಂದಮ್ಮನ ಪ್ರವೀಣ್ ಕುಮಾರ್, ಸದಸ್ಯರಾದ ಕೆ ಆರ್ ದಿನೇಶ್, ಹಾಗೂ ಕಾನೂನು ಸಲಹೆಗಾರರಾದ ಶ್ರೀ ನಿಡ್ಡೆಮಲೆ ಪ್ರಕಾಶ್ ಉಪಸ್ಥಿತರಿದ್ದರು.
ವರದಿ: ಪ್ರಿತುನ್ ಪೂವಣ್ಣ




















