ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೆನಕನ ಕಾಲುವೆಯ ನೂತನ ಸೇತುವೆ ಅಂಚು ಕುಸಿತ: ಕಳಪೆ ಕಾಮಗಾರಿ ಆರೋಪ, ಸಾರ್ವಜನಿಕರ ಆತಂಕ

ವರದಿ : ಜಿಲಾನಸಾಬ್ ಬಡಿಗೇರ್

ಬಳ್ಳಾರಿ / ಕಂಪ್ಲಿ : ಕೋಟೆಯ ಗಂಗಾವತಿ ರಸ್ತೆಯಲ್ಲಿ ವಿಜಯನಗರ ಕಾಲದ ಪುರಾತನ ಕಾಲುವೆ ಇದ್ದು, ಇತ್ತೀಚೆಗಷ್ಟೇ ಬೆನೆಕನ ಕಾಲುವೆಯ ಹತ್ತಿರ ನಿರ್ಮಾಣಗೊಂಡಿರುವ ರಾಜ್ಯ ಹೆದ್ದಾರಿ 29ರ ಸಂಪರ್ಕ ಸೇತುವೆ ಬೆನಕನ ಕಾಲುವೆಯ ನೂತನ ಸೇತುವೆಯ ಅಂಚು ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದು ಚರಂಡಿಯಂತೆ ಕಾಣಿಸುವಷ್ಟು ಭೀಕರವಾಗಿ ಜರಿದು ಬಿದ್ದಿದ್ದು, ಸೇತುವೆಯ ಸುರಕ್ಷತೆಯ ಬಗ್ಗೆಯೇ ಈಗ ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಆತಂಕ ಮೂಡಿಸಿದೆ.

ತುಂಡಾದ ರಸ್ತೆ ಸಂಪರ್ಕ, ಅಪಾಯಕಾರಿ
ಕಂದಕ :

ಹೊಸದಾಗಿ ನಿರ್ಮಿಸಲಾದ ಕಾಂಕ್ರೀಟ್ ತಡೆಗೋಡೆಯ ಪಕ್ಕದಲ್ಲೇ ರಸ್ತೆಯ ಮಣ್ಣು ಮತ್ತು ಜಲ್ಲಿಕಲ್ಲುಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ. ಇದರಿಂದಾಗಿ ಸೇತುವೆಯ ಪಕ್ಕದಲ್ಲಿ ದೊಡ್ಡ ಕಂದಕ ಸೃಷ್ಟಿಯಾಗಿದ್ದು, ರಸ್ತೆಯ ಅಂಚು ಸಂಪೂರ್ಣವಾಗಿ ನಡುರಸ್ತೆಯವರೆಗೂ ಕುಸಿಯತೊಡಗಿದೆ. ಹೊಸದಾಗಿ ಕಟ್ಟಿದ ಸೇತುವೆಯು ಇಷ್ಟು ಬೇಗ ಜರಿದಿರುವುದು ಕಾಮಗಾರಿಯ ಗುಣಮಟ್ಟವನ್ನು ಎತ್ತಿ ತೋರಿಸುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಅಪಘಾತದ ಭೀತಿಯಲ್ಲಿ ವಾಹನ ಸವಾರರು :

ಈ ಮಾರ್ಗದಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಸೇತುವೆಯ ಅಂಚು ಕುಸಿದಿರುವುದರಿಂದ ವಾಹನಗಳು ನಿಯಂತ್ರಣ ತಪ್ಪಿ ಕಂದಕಕ್ಕೆ ಬೀಳುವ ಅಪಾಯ ಎದುರಾಗಿದೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಈ ಜಾಗವು ಮೃತ್ಯು ಕೂಪದಂತಾಗಿದೆ. ಇಷ್ಟಾದರೂ ಅಪಾಯದ ಮುನ್ಸೂಚನೆ ನೀಡುವ ಯಾವುದೇ ಎಚ್ಚರಿಕೆ ಫಲಕಗಳನ್ನು ಇಲ್ಲಿ ಅಳವಡಿಸದಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.

ತಕ್ಷಣದ ಕ್ರಮಕ್ಕೆ ಆಗ್ರಹ : “ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ನಿರ್ಮಿಸುವ ನೂತನ ಸೇತುವೆಗಳು ಮೊದಲ ಮಳೆಗೆ ಅಥವಾ ಕೆಲವೇ ದಿನಗಳಲ್ಲಿ ಹೀಗೆ ಕುಸಿದರೆ ಸಾರ್ವಜನಿಕರ ಪ್ರಾಣಕ್ಕೆ ಯಾರು ಹೊಣೆ?” ಎಂದು ಸ್ಥಳೀಯ ನಿವಾಸಿಗಳು ಪ್ರಶ್ನಿಸಿದ್ದಾರೆ. ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಹಾಗೂ ಗುತ್ತಿಗೆದಾರರು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ಕುಸಿದಿರುವ ಸೇತುವೆಯ ಅಂಚನ್ನು ಬಲಪಡಿಸಬೇಕು ಮತ್ತು ಶಾಶ್ವತ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!