ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

84ನೇ ವರ್ಷದ ವಾರ್ಷಿಕ ವರದಿ ಓದಿ ಹೇಳುವ ಮಹಾಸಭೆ

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ತಾಳಿಕೋಟೆ, ಮೈಲೇಶ್ವರ, ಮಸ್ಕನಾಳ ಮತ್ತು ಬಿಳೆಬಾವಿ ಗ್ರಾಮಗಳನ್ನು ಒಳಗೊಂಡ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ತಾಳಿಕೋಟೆ 84ನೇ ವರ್ಷದ ವಾರ್ಷಿಕ ವರದಿ ಓದಿ ಹೇಳುವ ಮಹಾಸಭೆಯನ್ನು ದಿನಾಂಕ 23 -9 -2026 ಬುಧವಾರ ಬೆಳಿಗ್ಗೆ 11 ಗಂಟೆಗೆ ಈ ಸಂಘದ ಅಧ್ಯಕ್ಷರಾದ ಶ್ರೀ ಗುರುಸಂಗಪ್ಪ ತ. ಕಸೆಟ್ಟಿ ಇವರ ಅಧ್ಯಕ್ಷತೆಯಲ್ಲಿ ತಾಳಿಕೋಟೆಯ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಈ ಸಭೆಯ ದಿವ್ಯ ಸಾನಿಧ್ಯವನ್ನು ತಾಲೂಕಿನ ಸುಕ್ಷೇತ್ರ ಗುಂಡುಕನಾಳ ಬೃಹನ್ಮಠ ಪಟ್ಟಾಧ್ಯಕ್ಷರಾದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿಯವರು, ಅಧ್ಯಕ್ಷತೆಯನ್ನು ಶ್ರೀ ಜಿ. ಟಿ. ಕಸೆಟ್ಟಿ ವಹಿಸಿದ್ದರು.
ಈ ಸಂಘದ ಅಧ್ಯಕ್ಷರು ಅವರೊಂದಿಗೆ ಉಪಾಧ್ಯಕ್ಷರಾದ ಶ್ರೀ ವೈ. ಡಿ. ಬರ್ದೇನಾಳ ಮತ್ತು ಸಂಘದ ಸರ್ವ ನಿರ್ದೇಶಕ, ನಿರ್ದೇಶಕಿಯರ ಮಂಡಳಿಯವರು, ಕ್ಷೇತ್ರ ಸಿಬ್ಬಂದಿ , ಬಿ ಡಿಸಿ ಸಿ ಬ್ಯಾಂಕ್ ತಾಳಿಕೋಟೆ ಶಾಖೆಯ ಶ್ರೀ ಆರ್. ಎಂ. ಗುರಿಕಾರ್ ಅವರು ವೇದಿಕೆಯನ್ನು ಹಂಚಿಕೊಂಡಿದ್ದರು.
ಈ ಮಹಾಸಭೆಯ ಸ್ವಾಗತವನ್ನು ಜಿ‌. ವಿ. ಮೂಲಿ ಮನೆಯವರು ಕೋರಿದರು.
ವರದಿ ವಾಚನವನ್ನು ಸಂಘದ ಲೆಕ್ಕಿಗರಾದ ಶ್ರೀ ಪ್ರವೀಣ ಬಾ. ಪಾಟೀಲ್ ಅವರು
ಈ ನಮ್ಮ ಸಂಘವು ಪ್ರತಿ ವರ್ಷದಂತೆ ಎಲ್ಲಾ ಖರ್ಚು ವೆಚ್ಚಗಳನ್ನು ತೆಗೆದು 54.22 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದು ತಮ್ಮೆಲ್ಲರ ಮುಂದೆ ಬಹಿರಂಗಪಡಿಸಲು ಅತೀವ ಸಂತೋಷವಾಗುತ್ತದೆ ಶೇರ್ ಮೆಂಬರುಗಳಿಗೆ ಡಿವಿಡೆಂಟ್ ವರ್ಷಕ್ಕೆ 10% ಕೊಡಲು ಶಿಫಾರಸ್ಸು ಮಾಡಿದ್ದೇವೆ ಎಂದು ಹೇಳಿ ವರದಿ ವಾಚನ ಮುಗಿಸಿದರು.
ನಂತರ ಗುರುಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಸಿಬ್ಬಂದಿ ವರ್ಗದವರು ಸೇರಿದಂತೆ ಸರ್ವರೂ ಹಾಜರಿದ್ದರು.
ಈ ಸಭೆಗೆ ಸರ್ವರೂ ಹಾಜರಾಗಿ ಶೋಭೆ ತಂದುಕೊಟ್ಟದ್ದಕ್ಕಾಗಿ ಈ ಸಂಘದ ಮುಖ್ಯ ವ್ಯವಸ್ಥಾಪಕರಾದ ಶ್ರೀ ಎಸ್.ಎಂ. ಪಾಟೀಲ ಅವರು ಸರ್ವರನ್ನೂ ಅಭಿನಂದಿಸಿದರು.

ವರದಿಗಾರರು ಸಂಗಮೇಶ ಸಿ. ಚೌದ್ರಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!