ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಧನೆಯ ಹಾದಿಯಲ್ಲಿ ಕಂಪ್ಲಿಯ ಮಹಿಳೆಯರು : ಅಂಜೂರದಿಂದ ಉದ್ಯೋಗ ಸೃಷ್ಟಿ

ಧರ್ಮಸ್ಥಳ ಯೋಜನೆ ನೆರವು: ಅಂಜೂರ ಸಂಘದ ಪೂಜಾರಾಣಿ-ಸುಧಾ ಯಶೋಗಾಥೆ

ಕಂಪ್ಲಿ: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನಲ್ಲಿ ವರ್ಷದುದ್ದಕ್ಕೂ ಅಂಜೂರವನ್ನು (Fig) ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇಲ್ಲಿನ ಸಿಹಿ ಅಂಜೂರ ಹಣ್ಣುಗಳಿಗೆ ಹೊರ ರಾಜ್ಯಗಳಲ್ಲೂ ಭಾರಿ ಬೇಡಿಕೆಯಿದ್ದು, ಪ್ರತಿದಿನ ಟ್ರಕ್‌ಗಳ ಮೂಲಕ ದೇಶದ ಮೂಲೆ ಮೂಲೆಗೆ ಸಾಗಿಸಲ್ಪಡುತ್ತವೆ. ಆದರೆ, ಅಂಜೂರ ಹಣ್ಣುಗಳು ಬಹುಬೇಗನೆ ಕೊಳೆಯುವುದರಿಂದ (Perishable), ಇವುಗಳನ್ನು ದೀರ್ಘಕಾಲ ಸಂಗ್ರಹಿಸಿಡುವುದು ರೈತರಿಗೆ ದೊಡ್ಡ ಸವಾಲಾಗಿತ್ತು.
ರೈತರ ಹಾಗೂ ಈ ಹಣ್ಣಿನ ಈ ಮಿತಿಯನ್ನು ಹತ್ತಿರದಿಂದ ಕಂಡ ಕಂಪ್ಲಿಯ ಶ್ರೀನಿವಾಸ ಕ್ಯಾಂಪ್‌ನ ಇಬ್ಬರು ಧೈರ್ಯಶಾಲಿ ಮಹಿಳೆಯರು ಅಂಜೂರದ ಭವಿಷ್ಯವನ್ನೇ ಬದಲಿಸುವಂತಹ ವಿಶಿಷ್ಟ ಉದ್ಯಮಕ್ಕೆ ಕೈಹಾಕಿ ಇಂದು ಯಶಸ್ವಿಯಾಗಿದ್ದಾರೆ.

ಸ್ವಸಹಾಯ ಸಂಘದ ನೆರವು – ಉದ್ಯಮಶೀಲತೆಯ ಕನಸು :

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ (SKDRDP) ರಚನೆಯಾಗಿರುವ ‘ಅಂಜೂರ’ ಸ್ವಸಹಾಯ ಸಂಘದ ಸದಸ್ಯರಾದ ಪೂಜಾರಾಣಿ ಮತ್ತು ಕೆ. ಸುಧಾ ಎಂಬ ಉದ್ಯಮಶೀಲ ಮಹಿಳೆಯರೇ ಈ ಯಶೋಗಾಥೆಯ ರೂವಾರಿಗಳು. ಕೇವಲ ಹಣ್ಣಾಗಿ ಅಥವಾ ಜ್ಯೂಸ್ ರೂಪದಲ್ಲಿ ಮಾತ್ರ ಬಳಕೆಯಾಗುತ್ತಿದ್ದ ಅಂಜೂರಕ್ಕೆ ಮೌಲ್ಯವರ್ಧನೆ (Value Addition) ಮಾಡಿ, ಗ್ರಾಹಕರು ಇಷ್ಟಪಡುವ ಸವಿಯಾದ ತಿಂಡಿಗಳ ರೂಪ ನೀಡುವ ವಿಶಿಷ್ಟ ಪ್ರಯತ್ನವನ್ನು ಇವರು ಕೈಗೊಂಡರು.

ಮೌಲ್ಯವರ್ಧನೆಯಲ್ಲಿ ಸಾಧಿಸಿದ ಯಶಸ್ಸು :

ಸಾಮಾನ್ಯವಾಗಿ ಹಣ್ಣಾದ ನಂತರ ಕೆಲವೇ ದಿನಗಳಲ್ಲಿ ಹಾಳಾಗುವ ಅಂಜೂರವನ್ನು ಸಂಸ್ಕರಿಸಿ, ಅದರಿಂದ ವೈವಿಧ್ಯಮಯ ತಿಂಡಿ-ತಿನಿಸುಗಳನ್ನು ತಯಾರಿಸುವ ತಂತ್ರಜ್ಞಾನ ಹಾಗೂ ಪಾಕವಿಧಾನವನ್ನು ಇವರು ಕಂಡುಕೊಂಡಿದ್ದಾರೆ. ಇವರ ಈ ಪರಿಶ್ರಮದ ಫಲವಾಗಿ ಇಂದು ಅಂಜೂರದ ವಿಶಿಷ್ಟ ಪ್ರೊಡಕ್ಟ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿವೆ. ಇದು ಹಣ್ಣುಗಳು ವ್ಯರ್ಥವಾಗುವುದನ್ನು ತಡೆಯುವುದಲ್ಲದೆ, ದೀರ್ಘಕಾಲ ಬಾಳಿಕೆ ಬರುವಂತೆ ಮಾಡಿದೆ.
ಮಾದರಿಯಾದ ಗ್ರಾಮೀಣ ಮಹಿಳೆಯರು:
ಸ್ಥಳೀಯವಾಗಿ ಸಿಗುವ ಕೃಷಿ ಉತ್ಪನ್ನಕ್ಕೆ ವಾಣಿಜ್ಯ ಮತ್ತು ಆಧುನಿಕ ರೂಪ ನೀಡುವ ಮೂಲಕ ಪೂಜಾರಾಣಿ ಮತ್ತು ಕೆ. ಸುಧಾ ಅವರು ಗ್ರಾಮೀಣ ಭಾಗದ ಮಹಿಳೆಯರ ಸ್ವಾವಲಂಬನೆಗೆ ಸಾಕ್ಷಿಯಾಗಿದ್ದಾರೆ. ಕೃಷಿ ಆಧರಿತ ಸಣ್ಣ ಕೈಗಾರಿಕೆ ಅಥವಾ ಗೃಹ ಉದ್ಯಮವನ್ನು ಹೇಗೆ ಯಶಸ್ವಿಯಾಗಿ ಮುನ್ನಡೆಸಬಹುದು ಎಂಬುದಕ್ಕೆ ಇವರಿಬ್ಬರು ಇಂದಿನ ಯುವ ಪೀಳಿಗೆಗೆ ಮತ್ತು ಇತರ ಮಹಿಳಾ ಸಂಘಗಳಿಗೆ ಮಾದರಿಯಾಗಿದ್ದಾರೆ. ಕುರುಗೋಡು ಮತ್ತು ಕಂಪ್ಲಿ ಭಾಗದ ಅಂಜೂರ ಬೆಳೆಗಾರರ ಪಾಲಿಗೆ ಇವರ ಈ ನಡೆ ಹೊಸ ಭರವಸೆಯ ಬೆಳಕನ್ನು ಮೂಡಿಸಿದೆ.

ಯೋಜನೆಯ ಸಹಾಯ :

ಪೂಜಾರಾಣಿ ಮತ್ತು ಕೆ. ಸುಧಾರವರಿಗೆ ತಯಾರಿಯ ಬಗ್ಗೆ ತರಬೇತಿಯನ್ನು ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರ ನೀಡಿದೆ. ಯಂತ್ರ, ಟ್ರೇ ಖರೀದಿಗೆ ಬೇಕಾದ ಹಣಕಾಸಿನ ವ್ಯವಸ್ಥೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಬ್ಯಾಂಕ್‌ನಿಂದ ಆಗಿದೆ. ಪರಿಣಾಮ ಇದೀಗ ಕಂಪ್ಲಿಯಲ್ಲಿ ಪೂಜಾ ರಾಣಿ ಮತ್ತು ಸುಧಾರವರು ‘ನೇಚ‌ರ್ ಫಿಗ್ ಬಾರ್’ ಎಂಬ ಹೆಸರಿನಲ್ಲಿ ಅಂಜೂರ ರೋಲ್ಸ್ ಅನ್ನು ತಯಾರಿಸುತ್ತಿದ್ದಾರೆ. ತಾವು ಸ್ವತಹ ದುಡಿಯುವ ಜೊತೆಗೆ ಮೂರು ಮಂದಿಗೆ ಕೆಲಸವನ್ನು ನೀಡಿದ್ದಾರೆ.

ಅಂಜೂರ ರೋಲ್ ಎಂಬ ಸಾವಯವ ತಿಂಡಿ :

ಕಳೆದ ಐದು ವರ್ಷಗಳಿಂದ ಕುರುಗೋಡಿನಿಂದ ಗುಣಮಟ್ಟದ ಅಂಜೂರ ಹಣ್ಣನ್ನು ಕೆ.ಜಿ.ಗೆ ರೂ. 15 ರಂತೆ ನೀಡಿ ಖರೀದಿಸುತ್ತಿದ್ದಾರೆ. ಕುರುಗೋಡುವಿನಲ್ಲಿ ಸರ್ವಋತುಗಳಲ್ಲೂ ರೋಲ್ಸ್ ತಯಾರಿಗೆ ಅಂಜೂರ ದೊರೆಯುತ್ತದೆ.
ಹಣ್ಣನ್ನು ತಂದು ಚೆನ್ನಾಗಿ ಸ್ವಚ್ಛಗೊಳಿಸಿ ಅದರ ತಿರುಳಿನಿಂದ ಯಂತ್ರದ ಮೂಲಕ ರಸ ತೆಗೆಯುತ್ತಾರೆ. ನಂತರ ಅದಕ್ಕೆ ಬೆಲ್ಲ ಹಾಕಿ ಟೀಗೆ ಹಾಕಿ 20 ತಾಸುಗಳ ಕಾಲ ಡೈಯರ್‌ನಲ್ಲಿಟ್ಟು ಒಣಗಿಸುತ್ತಾರೆ. ಆಗ ಅದು ನಸುಗಪ್ಪು ಬಣ್ಣಕ್ಕೆ ತಿರುಗುತ್ತದೆ. ನಂತರ ಡೆಯರ್‌ನಿಂದ ತೆಗೆದು ಬೆರಳುದ್ದಕ್ಕೆ ಕತ್ತರಿಸಿ ಅಂದವಾದ ಪ್ಯಾಕ್‌ ನಲ್ಲಿ ತುಂಬಿಸುತ್ತಾರೆ. 200 ಗ್ರಾಂ. ಬಾಕ್ಸ್‌ ವೊಂದರ ಬೆಲೆ ರೂ. 100. ರಾಸಾಯನಿಕ, ಸಿಹಿ, ಬಣ್ಣ, ಪರಿಮಳ, ರುಚಿಗೆ ಬೇಕಾದ ಪದಾರ್ಥಗಳನ್ನು ಮಿಶ್ರಣ ಮಾಡದ ತಿಂಡಿಯನ್ನು ತಿನ್ನಬೇಕೆನ್ನುವವರಿಗೆ ಇದೊಂದು ಉತ್ತಮ

ಪ್ರತಿ ದಿನ 20 ಕೆ.ಜಿ.ಯಷ್ಟು ತಯಾರಿಸುತ್ತಾರೆ. ಚೆನ್ನೈ, ಬೆಂಗಳೂರು, ಆಂಧ್ರ ಪ್ರದೇಶಗಳಲ್ಲಿ ಅಂಜೂರ ರೋಲ್‌ಗೆ ಬಹುಬೇಡಿಕೆಯಿದೆ. ಬಸ್ ಮೂಲಕ ಅಲ್ಲಿಗೆ ಕಳುಹಿಸುವ ವ್ಯವಸ್ಥೆಯೂ ಇದೆ. ಸುಮಾರು ಆರು ತಿಂಗಳುಗಳ ಕಾಲ ಇದು ಹಾಳಾಗುವುದಿಲ್ಲ. ಈ ಮಹಿಳಾಮಣಿಗಳ ಪ್ರಯತ್ನವನ್ನು ನಾವು ಪ್ರೋತ್ಸಾಹಿಸಬೇಕಾಗಿದೆ. ಉದ್ಯೋಗದ ಜೊತೆ ಇತರರ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುತ್ತಿರುವ ಇವರ ಸಾಧನೆ ನಿಜಕ್ಕೂ ಅಭಿನಂದನಾರ್ಹ. ಹೆಚ್ಚು ಪ್ರಚಾರ ದೊರೆಯದ ಕಾರಣ ತಯಾರಿಯ ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ ಎನ್ನುತ್ತಾರೆ ಸುಧಾರವರು.

ಯಾರಿಗಾದರೂ ಶುಭಾಶಯ ಕೋರಲು, ಹಬ್ಬ-ಹರಿದಿನಗಳಲ್ಲಿ ಅಂಗಡಿಗಳಲ್ಲಿ ದೊರೆಯುವ ಕೇಕ್. ಚಾಕಲೇಟ್‌ಗಳನ್ನು ಆಪ್ತರಿಗೆ, ಮಕ್ಕಳಿಗೆ ನೀಡುವ ಬದಲು ‘ಅಂಜೂರ ರೋಲ್’ ಅನ್ನು ನೀಡಬಹುದಾಗಿದೆ. ರಾಜ್ಯದಾದ್ಯಂತ ಬಸ್ ಮೂಲಕ ತಲುಪಿಸುವ ವ್ಯವಸ್ಥೆಯೂ ಇದೆ.

ಬೇಕಾದವರು ಪೂಜಾ ರಾಣಿ (6360857248) ಅಥವಾ ಕೆ. ಸುಧಾ (6361016732) ಇವರನ್ನು ಸಂಪರ್ಕಿಸಬಹುದಾಗಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!