ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಿನಗೂಲಿ ನಿರ್ಗತಿಕರ ಹಸಿವಿಗೆ ಸ್ಪಂದಿಸಿದ ಕರವೇ ಸ್ವಾಭಿಮಾನಿ ಸೇನೆ ದಾನಿಗಳ ಸಹಕಾರ

ಕುಶಾಲನಗರ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಕುಶಾಲನಗರ ಜಾತ್ರೆ ಮೈದಾನದ ಗುಡಿಸಲಲ್ಲಿ ವಾಸವಿದ್ದ ನಿರ್ಗತಿಕ ನಿವಾಸಿಗಳಿಗೆ ಆಹಾರ ಸಾಮಗ್ರಿ ಹಾಗೂ ತರಕಾರಿ ಕಿಟ್‌ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದರು.

ಕುಶಾಲನಗರದ ಜಾತ್ರೆ ಮೈದಾನದಲ್ಲಿ ಕಳೆದ 18-20 ವರ್ಷಗಳಿಂದ ಗುಡಿಸಲುಗಳನ್ನು ನಿರ್ಮಿಸಿಕೊಂಡು, ಅತ್ಯಂತ ಕಡುಬಡತನದಲ್ಲಿ ವಾಸಿಸುತ್ತಿರುವ ಎಂಟು ಕುಟುಂಬಗಳಿಗೆ ಈ ನೆರವು ನೀಡಲಾಯಿತು. ಕೂಲಿ ಕೆಲಸ ನಂಬಿ ಜೀವನ ಸಾಗಿಸುತ್ತಿರುವ ಈ ಕುಟುಂಬಗಳ ಹಸಿವು ನೀಗಿಸಲು ಸಂಘಟನೆಯು ದಾನಿಗಳ ನೆರವಿನೊಂದಿಗೆ ಆಹಾರದ ಕಿಟ್ ವಿತರಿಸಲಾಯಿತು.

ಕಿಟ್ ವಿತರಿಸಿ ಮಾತನಾಡಿದ ಕರವೇ ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, “ಕಳೆದ ಎರಡು ದಶಕಗಳಿಂದ ಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಬಡ ಕುಟುಂಬಗಳಿಗೆ ಆಹಾರದ ಕಿಟ್ ಮತ್ತು ತರಕಾರಿ ನೀಡುತ್ತಿರುವುದು ನಮ್ಮ ಸಂಘಟನೆಗೆ ತೃಪ್ತಿ ತಂದಿದೆ. ಇಂತಹ ನಿಜವಾದ ನಿರ್ಗತಿಕರಿಗೆ ಸಹಾಯ ಹಸ್ತ ಚಾಚಿದಾಗ ದೇವರು ನಮಗೆ ಮತ್ತು ನಮ್ಮ ಸಂಘಟನೆಗೆ ಸದಾ ಒಳ್ಳೆಯದನ್ನು ಮಾಡುತ್ತಾನೆ ಎಂದರು.

ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಬಡವರ ಕಲ್ಯಾಣಕ್ಕಾಗಿ ಯಾವುದೇ ನೆರವು ಕೇಳಿದರೂ ಕೂಪರ್ ಎಸ್ಟೇಟ್‌ನ ಮಾಲೀಕರಾದ ನಿಶಾಂತ್ ಅವರು ತಕ್ಷಣವೇ ಸ್ಪಂದಿಸುತ್ತಾರೆ. ಸದಾ ಮೊದಲ ಸಾಲಿನಲ್ಲಿ ನಿಂತು ಸಹಾಯ ಮಾಡುವ ಇಂತಹ ಸಹೃದಯಿ ದಾನಿ ನಿಶಾಂತ್ ಅವರಿಗೆ ನಮ್ಮ ಸಂಘಟನೆಯ ಪರವಾಗಿ ಹೃದಯಪೂರ್ವಕ ಧನ್ಯವಾದಗಳು, ಎಂದು ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

ಆಹಾರದ ಕಿಟ್ ಪಡೆದ ಗುಡಿಸಲು ನಿವಾಸಿಯೊಬ್ಬರು ಭಾವುಕರಾಗಿ ಮಾತನಾಡಿ, “ನಾವು ಒಂದೊಂದು ಹೊತ್ತಿನ ಊಟಕ್ಕೂ ದಿನವೂ ತುಂಬಾ ಕಷ್ಟ ಪಡುತ್ತಿದ್ದೆವು. ನಮಗೆ ಇದುವರೆಗೆ ಯಾರೂ ಈ ರೀತಿಯ ಆಹಾರದ ವ್ಯವಸ್ಥೆ ಮಾಡಿಕೊಟ್ಟಿರಲಿಲ್ಲ. ಕರವೇ ಸ್ವಾಭಿಮಾನಿ ಸೇನೆಯವರು ಮತ್ತು ದಾನಿಗಳು ನಮ್ಮ ಕಷ್ಟ ಅರಿತು, ತಾವಾಗಿಯೇ ಬಂದು ಕಿಟ್ ನೀಡಿರುವುದು ನಮಗೆ ಅಪಾರ ಸಂತೋಷ ತಂದಿದೆ. ನಮ್ಮ ಹೊಟ್ಟೆ ತುಂಬಿಸಿದ ಎಲ್ಲರಿಗೂ ಒಳ್ಳೆಯದಾಗಲಿ,” ಎಂದು ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಕರವೇ ಸ್ವಾಭಿಮಾನಿ ಸೇನೆ ಉಪಾಧ್ಯಕ್ಷರಾದ ರಾಜಶೇಖರ್ ಗೌಡ ಮತ್ತು ಕರವೇ ಸ್ವಾಭಿಮಾನಿ ಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜಯಶ್ರೀ ಮುರುಗೇಶ್ ಮತ್ತು ಜಿಲ್ಲಾ ಗೌರವಾಧ್ಯಕ್ಷರಾದ ನಂಜಪ್ಪ ಮತ್ತು ಕುಶಾಲನಗರ ತಾಲೂಕ ಅಧ್ಯಕ್ಷರಾದ ಶಿವು ಮತ್ತು ಕುಶಾಲನಗರ ತಾಲ್ಲೂಕು ಕಾರ್ಮಿಕ ಘಟಕದ ಅಧ್ಯಕ್ಷರಾದ ಚಂದ್ರ ಮತ್ತು ತಾಲೂಕು ಉಪಾಧ್ಯಕ್ಷರಾದ ನಾಸಿರ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಣಿಕಂಠ ಮತ್ತು ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಗಳದ ಭವ್ಯ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಖಾಸಿಂ ಮತ್ತು ರಾಜ್ಯೋತ್ಸವ ಖಜಾಂಜಿಗಳಾದ ಅಂತೋನಿ ಮತ್ತು ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷರಾದ ದಿವ್ಯ ಡಿಸೋಜ ಮತ್ತು ತಾಲೂಕು ಗೌರವ ಅಧ್ಯಕ್ಷರಾದ ನಾಗರತ್ನ ಮತ್ತು ತಾಲೂಕು ಸಂಚಾಲಕರದ ವಿ ಪಿ ಚಂದ್ರಶೇಖರ್ ಮತ್ತು ವಿಲ್ಸನ್ ಮತ್ತು ಚಂದ್ರು ಮತ್ತು ಡ್ಯಾನಿಯಲ್ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!