ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಸಿರಾ ನಗರ ದಲ್ಲಿ ಹಾವನೂರು ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎ. ಶಿವಕುಮಾರ್ ಅವರು ಮಾತನಾಡಿದರು. ಗಾಂಧೀಜಿಯವರ ಜೀವನ ಚರಿತ್ರೆ ಹಾಗೂ ಅಹಿಂಸೆ ಸತ್ಯ ಉಪವಾಸ ಸತ್ಯಾಗ್ರಹ ಮತ್ತು ಭಾರತ ಸ್ವಾತಂತ್ರ ಹೋರಾಟ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜೀವನ ಚರಿತ್ರೆ ಹಾಗೂ ಅವರ ಜೈ ಜವಾನ್ ಜೈ ಕಿಸಾನ್ ಅವರ ವಿಚಾರಗಳನ್ನು ಆದರ್ಶಗಳನ್ನು ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಬೆಳೆಸಿಕೊಳ್ಳಬೇಕು ಎಂಬ ನುಡಿ ಮಾತುಗಳನ್ನು ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜ ಶಾಸ್ತ್ರ ಉಪನ್ಯಾಸಕರು ಬಸವರಾಜ್ ಸರ್ ಇತಿಹಾಸ ಉಪನ್ಯಾಸಕರು ಕೊಟ್ಟ ಕರಿಯಣ್ಣ ಮಹಮದ್ ತೊಫಿಕ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಸಿಬ್ಬಂದಿ ಲಕ್ಷ್ಮಣ ಭಾಗವಹಿಸಿದ್ದರು.
ವರದಿ ಕೊಟ್ಟ ಕರಿಯಣ್ಣ




















