ಗಂಗಾವತಿ ತಾಲೂಕಿನ ಡಣಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಡಣಾಪುರ ಆವರಣದಲ್ಲಿ ಸ್ವಚ್ಚತೆ ಪ್ಯಾಕ್ಸ ಡಣಾಪುರ ಹಾಗೂ ಇಫ್ಕೋ ಸಂಸ್ಥೆಯೊಂದಿಗೆ ಮಹತ್ಮಾ ಗಾಂಧೀಜಿ ಜಯಂತಿಯನ್ನು ಸಂಘದ ಆವರಣದಲ್ಲಿ ಸ್ವಚ್ಚ ಮಾಡುವ ಮೂಲಕ ಆಚರಿಸಲಾಯಿತು.
ಈ ವೇಳಾ ಇಫ್ಕೋ ಸಂಸ್ಥೆಯ ವಿಜಯ ಕುಮಾರ ಮಾತನಾಡಿ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳುವುದರಿಂದ ಒಳ್ಳಯ ಪರಿಸರ ಹಾಗೂ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಗಾಂಧೀಜಿಯವರ ಆಶಯದಂತೆ ನಮ್ಮ ಜೀವನದಲ್ಲಿ ಬದುಕು ಕಟ್ಟಿಕೊಳ್ಳೋಣ ಎಂದರು.
ಈ ವೇಳೆಯಲ್ಲಿ ಸಂಘದ ಅಧ್ಯಕ್ಷರಾದ ಬಿ.ರಾಘವೇಂದ್ರ ಹಾಗೂ ಗ್ರಾಮದ ರೈತರಾದ ಚಿದಾನಂದಪ್ಪ ಈ.,ವಿರುಪಣ್ಣ , ಇಫ್ಕೋ ಸಂಸ್ಥೆ ಪ್ರತಿನಿಧಿ ವಿಜಯಕುಮಾರ , ಸಂಘದ ಪಂಪನಗೌಡ ,ಹನುಮೇಶ ಭಾವಿಕಟ್ಟಿ , ತಿಪ್ಪೇಸ್ವಾಮಿ ,ನಾಗರಾಜ ,ಸಗೀರ್, ಲಕ್ಷ್ಮಮ್ಮ ಸೇರಿದಂತೆ ಇತರರು ಭಾಗಿ ಇದ್ದರು.
- ಕರುನಾಡ ಕಂದ ಸುದ್ದಿ




















