ಪೊನ್ನಂಪೇಟೆ: ಪ್ರಸಿದ್ಧ ಗೋಣಿಕೊಪ್ಪ ದಸರಾ ಉತ್ಸವದ ಲಾಂಛನ ಬಿಡುಗಡೆ ಕಾರ್ಯಕ್ರಮವನ್ನು, ವಿರಾಜಪೇಟೆ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.
ಉಮಾಮಹೇಶ್ವರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ 48 ನೇ ಸಾಲಿನ ದಸರಾ ಉತ್ಸವದ ಅಧಿಕೃತ ಲಾಂಛನವನ್ನು ಬಿಡುಗಡೆಗೊಳಿಸಿ ಶುಭ ಕೋರಿದ ಮಾನ್ಯ ಶಾಸಕರು, ಈ ಬಾರಿಯ ನಾಡಹಬ್ಬ ದಸರಾವು ಎಲ್ಲರಿಗೂ ಒಳಿತನ್ನು ಮಾಡಿ ಭಾಗವಹಿಸುತ್ತಿರುವ ಎಲ್ಲರಿಗೂ ಶುಭವಾಗಲೆಂದು ಹಾರೈಸಿದರು.
ವರದಿ: ಪ್ರಿತುನ್ ಪೂವಣ್ಣ




















