ಬಳ್ಳಾರಿ / ಕಂಪ್ಲಿ : ಕೋಟೆ ನಗರಿ ಕಂಪ್ಲಿಯಲ್ಲಿ ಇದೇ ಅಕ್ಟೋಬರ್ 4 ಮತ್ತು 5 ರಂದು ಇತಿಹಾಸ ಪ್ರಸಿದ್ಧ ‘ಗಂಡುಗಲಿ ಕುಮಾರ ರಾಮ ವೈಭವ – 2026’ ಮತ್ತು ತಾಲೂಕು ಮಟ್ಟದ 3ನೇ ಮಹಾ ಅಧಿವೇಶನದ ಮಹಾ ಸಂಗಮ ಜರುಗಲಿದ್ದು, ಕಂಪ್ಲಿ ನಗರವು ಸಾಂಸ್ಕೃತಿಕ ಕಳೆಯನ್ನು ಪಡೆದುಕೊಳ್ಳುತ್ತಿದೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕು ಶಾಮಿಯಾನ ಡೆಕೋರೇಷನ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ (ರಿ.) ನೇತೃತ್ವದಲ್ಲಿ ಈ ವೈಭವದ ಆಮಂತ್ರಣ ಪತ್ರಿಕೆ ಈಗಾಗಲೇ ಬಿಡುಗಡೆಯಾಗಿದ್ದು, ಸಾರ್ವಜನಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಕಣ್ಮನ ಸೆಳೆಯಲಿರುವ ದೃಶ್ಯ ವೈಭವದ ಮಹಾದ್ವಾರದ ಕಮಾನು :
ಕಾರ್ಯಕ್ರಮದುದ್ದಕ್ಕೂ ಅತ್ಯಾಧುನಿಕ ಧ್ವನಿ ಮತ್ತು ಅದ್ಭುತ ಬೆಳಕಿನ (Sound & Light) ವಿಶಿಷ್ಟ ಸಂಯೋಜನೆ ಇರಲಿದ್ದು, ಕಂಪ್ಲಿಯ ಹಬ್ಬದ ವಾತಾವರಣಕ್ಕೆ ಡಿಜಿಟಲ್ ಸ್ಪರ್ಶ ಸಿಗಲಿದೆ. ತಾಲೂಕಿನ ಕಲೆ, ಸಂಸ್ಕೃತಿ ಮತ್ತು ವೃತ್ತಿಪರರ ಬದುಕಿನ ಹಿತರಕ್ಷಣೆಯನ್ನು ಸಾರುವ ನಿಟ್ಟಿನಲ್ಲಿ ಈ ಮಹಾ ವೇದಿಕೆ ಸಜ್ಜಾಗುತ್ತಿದೆ.
ಎರಡು ದಿನಗಳ ಮಹಾ ಸಂಭ್ರಮದ ವಿವರ :
- ದಿನಾಂಕ: 04-10-2026 (ಭಾನುವಾರ) ಮತ್ತು 05-10-2026 (ಸೋಮವಾರ)
- ಸ್ಥಳ: ಶ್ರೀ ವೀರಶೈವ ಭವನ (ವಾರದ ಸಂತೆ ಮಾರ್ಕೆಟ್ ಹತ್ತಿರ, ಕಂಪ್ಲಿ)
“ನಮ್ಮ ತಾಲೂಕಿನ ಸಾಂಸ್ಕೃತಿಕ ಅಸ್ಮಿತೆಯನ್ನು ಎತ್ತಿ ಹಿಡಿಯುವ ಹಾಗೂ ಸಂಘಟನೆಯ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ 3ನೇ ಮಹಾ ಅಧಿವೇಶನ ಮೈಲಿಗಲ್ಲಾಗಲಿದೆ. ಕಂಪ್ಲಿ ಜನತೆ ಸೌಂಡ್ ಮತ್ತು ಲೈಟಿಂಗ್ಸ್ನ ಈ ಅಭೂತಪೂರ್ವ ರಂಗು-ರಂಗಿನ ಹಬ್ಬಕ್ಕೆ ಸಾಕ್ಷಿಯಾಗಬೇಕು.”
ಎಂದು ಸಂಘದ ಆಯೋಜಕರು ತಿಳಿಸಿದ್ದಾರೆ.
ಸ್ಥಳೀಯ ಧಾರ್ಮಿಕ ಕೇಂದ್ರಗಳಾದ ಶ್ರೀ ಸೋಮೇಶ್ವರ ದೇವಸ್ಥಾನ, ಶ್ರೀ ಪೇಟೆ ಬಸವೇಶ್ವರ ದೇವಸ್ಥಾನ ಹಾಗೂ ಸೈಯದ್ ಮುಸ್ತಫ ಖಾದ್ರಿ ದರ್ಗಾ, ಹಾಗೂ ಚರ್ಚ್ ಸೌಹಾರ್ದತೆಯ ನೆರಳಿನಲ್ಲಿ ನಡೆಯುತ್ತಿರುವ ಈ ಸಾಂಸ್ಕೃತಿಕ ಹಬ್ಬಕ್ಕೆ ನಾಡಿನ ಪ್ರಮುಖ ಗಣ್ಯರು ಸಾಕ್ಷಿಯಾಗಲಿದ್ದಾರೆ. ವೃತ್ತಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















