ಹುನಗುಂದ: ಕವಿ ಸಮಯ ವೇದಿಕೆ ವತಿಯಿಂದ ಕನ್ನಡ ನಾಡಿನ ಹೆಮ್ಮೆಯ ಸಾಹಿತಿಗಳ ಬದುಕು–ಬರಹ ಕುರಿತು ಹಮ್ಮಿಕೊಂಡಿರುವ ಸರಣಿ ಉಪನ್ಯಾಸ ಮಾಲಿಕೆ–3ರ ಅಂಗವಾಗಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ ಬದುಕು–ಬರಹ ಕುರಿತು ಉಪನ್ಯಾಸ ಕಾರ್ಯಕ್ರಮ ಅ.4ರಂದು ಸಂಜೆ 7ರಿಂದ 8ರವರೆಗೆ ಜೂಮ್ ವೇದಿಕೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ, ತಾಲೂಕು ಪಂಚಾಯಿತಿ ಮುದ್ದೇಬಿಹಾಳದ ಸಹ ನಿರ್ದೇಶಕ ಡಾ. ಮಲ್ಲಿಕಾರ್ಜುನ ಬೆಳಗಲ್ ಅವರು ‘ಶಿವರಾಮ ಕಾರಂತರ ಬದುಕು–ಬರಹ’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಶ್ರೀಮತಿ ಗೀತಾ ತಾರಿವಾಳ ಅವರು ಶಿವರಾಮ ಕಾರಂತರ ಭಾವಗೀತೆಯೊಂದಿಗೆ ಪ್ರಾರ್ಥನೆ ನೆರವೇರಿಸಲಿದ್ದಾರೆ.
ಸಾಹಿತಿ ಡಿ.ಎಂ. ಬಾಗವಾನ ಅವರು ಸ್ವಾಗತಿಸಲಿದ್ದು, ಖ್ಯಾತ ಹಿರಿಯ ನ್ಯಾಯವಾದಿ ಹಾಗೂ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್, ಹುನಗುಂದದ ಅಧ್ಯಕ್ಷ ಮಹಾಂತೇಶ ಅವಾರಿ ಅವರು ಉಪಸ್ಥಿತಿ ನುಡಿ ನೀಡಲಿದ್ದಾರೆ.
ಸಾಹಿತಿ ಗುಂಡಪ್ಪ ಕುರಿ ವಂದನಾರ್ಪಣೆ ನೆರವೇರಿಸಲಿದ್ದು, ಸಾಹಿತಿ ಬಸವರಾಜ ಬಲಕುಂದಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಕನ್ನಡ ಕವಿ ಮನಸುಗಳು, ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕವಿ ಸಮಯ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ. ಕಾರ್ಯಕ್ರಮದ ಜೂಮ್ ಲಿಂಕ್ ಅನ್ನು ಶನಿವಾರ ಬಿಡುಗಡೆ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















