
ಕೊರಟಗೆರೆ ಕೋಳಾಲ ಹೋಬಳಿಯ ಸುಂಕದಹಳ್ಳಿ ಗ್ರಾಮದಲ್ಲಿ ಶ್ರೀ ಗಜಾನನ ಗೆಳೆಯರ ಬಳಗದಿಂದ ಅದ್ದೂರಿ ಗಣಪತಿ ಪ್ರತಿಷ್ಠಾಪನೆ ನೆರವೇರಿದ್ದು ಇಂದು ಸುಂದರ ಮೆಲೋಡಿ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಪಿ.ಎನ್.ಕೆ ಗ್ರಾಮಸ್ಥರ ಆಹ್ವಾನಕ್ಕೆ ಗ್ರಾಮಸ್ಥರು ,ಮಹಿಳೆಯರು, ಸಂಘದ ಸದಸ್ಯರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿ. ಎನ್. ಕೆ.ಅವರು, ಎಲ್ಲರೂ ಒಟ್ಟಾಗಿ ಯಾವುದೇ ಜಾತಿ ಭೇದವಿಲ್ಲದೆ ಒಂದಾಗಿ ಮಾಡುವ ಸಂಭ್ರಮ ಅದು ಗಣೇಶ ಮಹೋತ್ಸವ. ಅದೇ ರೀತಿ ಎಲ್ಲರೂ ಒಟ್ಟಾಗಿ ಬದುಕೋಣ ಎಂದರು. ನಾನು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತಮ್ಮ ಮೊದಲ ಆದ್ಯತೆ ಎಂದು ಹೇಳಿದರು. ಗ್ರಾಮದಲ್ಲಿ ಶಾಲೆಯಿದ್ದರೆ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಜ್ಞಾನ ಬೆಳೆಯುತ್ತದೆ ಶಾಲೆಗಳ ಅಭಿವೃದ್ಧಿಗೆ ತಮ್ಮಿಂದಾಗುವ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಮಕ್ಕಳಿಗೆ ಟ್ರ್ಯಾಕ್ ಸೂಟ್ ಯೂನಿಫಾರ್ಮ್ ಮತ್ತು ಬಡ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಲ್ಯಾಪ್ಟಾಪ್ ನೀಡುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಹೆಣ್ಣು ಮಕ್ಕಳಿಗೆ ವರಮಹಾಲಕ್ಷ್ಮಿ ಹಬ್ಬದ ಬಾಗಿನ ನೀಡಿ ಹಾರೈಸಿದರು, ಗ್ರಾಮಗಳ ಜನರೊಂದಿಗೆ ತಮ್ಮ ಬಾಂಧವ್ಯ ಮುಂದುವರಿಸುವುದಾಗಿ ಹೇಳಿದರು.
ಆದರೆ ನಾವು ಹುಟ್ಟಿ ಬೆಳೆದ ಗ್ರಾಮಗಳಿಗೆ, ನಮ್ಮನ್ನು ಬೆಳೆಸಿದ ಜನರಿಗೆ ನಮ್ಮಿಂದಾಗುವ ಸಹಾಯ ಮಾಡೋಣಎಂದು ಪಿ.ಎನ್. ಕೃಷ್ಣಮೂರ್ತಿ ಹೇಳಿದರು.
ಇಲ್ಲಿನ ಜನರ ಪ್ರೀತಿ ಮತ್ತು ಆಶೀರ್ವಾದವನ್ನು ನಾನು ಮರೆಯುವುದಿಲ್ಲ. ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಬಂದರೆ ನನಗೂ ಒಂದು ಅವಕಾಶ ನೀಡಿ. ನಿಮ್ಮೊಂದಿಗೆ ಸೇರಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡೋಣ ಎಂದರು. ಮುಂದೆ ಜೆಡಿಎಸ್ ಭದ್ರಕೋಟೆಯಾಗಿದ್ದ ಕೊರಟಗೆರೆಯಿಂದ ನಾನು 2028ಕ್ಕೆ ಸ್ಪರ್ಧಿಸುತ್ತೇನೆ ನನ್ನ ಗೆಲುವು ನಿಮ್ಮೆಲ್ಲರ ಗೆಲುವು, ಎಚ್. ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದೇ ಆಗುತ್ತಾರೆ ಎಂದು ಭರವಸೆ ನೀಡಿದರು.
ಮಾವತ್ತೂರು ಮಂಜುನಾಥ್ ಮಾತನಾಡಿ
ಪಿಎನ್ ಕೃಷ್ಣಮೂರ್ತಿ ಅವರು ಗ್ರಾಮಗಳ ದೇವಸ್ಥಾನಗಳ ಅಭಿವೃದ್ಧಿಗೆ ಸಹಾಯ ಮಾಡುತ್ತಿರುವುದು ಸಂತೋಷದ ವಿಚಾರ.
ಕೋಳಲ ವ್ಯಾಪ್ತಿಯ ಗ್ರಾಮಗಳೊಂದಿಗೆ ಪಿಎನ್ ಕೃಷ್ಣಮೂರ್ತಿ ಅವರಿಗೆ ಬಹಳ ವರ್ಷಗಳ ಆವಿನವ ಭಾವ ಸಂಬಂಧವಿದೆ ರಾಜಕೀಯ ಏನೇ ಇರಲಿ, ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.
ಗ್ರಾಮಗಳ ಅಭಿವೃದ್ಧಿಗೆ ಇನ್ನಷ್ಟು ಸಹಕಾರ ಸಿಗಬೇಕು. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಇಂತಹ ಜನಪ್ರತಿನಿಧಿಗಳು ಹಾಗೂ ಮುಖಂಡರು ಬೇಕು .ಪಿಎನ್‌ಕೆ ಅವರಿಗೆ ಎಲ್ಲಾ ಪಕ್ಷದ ಕಾರ್ಯಕರ್ತರು ಮುಖಂಡರು ಸ್ನೇಹಿತರಂತೆ ಅಣ್ಣ ತಮ್ಮಂದಿರಂತೆ ಬಾಂಧವ್ಯದಿಂದ ಇದ್ದಾರೆ
ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸುಂಕದಹಳ್ಳಿ ಶ್ರೀ ಗಜಾನನ ಗೆಳೆಯರ ಬಳಗದ ಸದಸ್ಯರು , ಮಾವತ್ತೂರು ಮಂಜುನಾಥ್, ಕೆಂಪರಾಜು, ದೇವರಾಜು ಮತ್ತು ಅನೇಕ ಮುಖಂಡರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ ಪ್ರಸನ್ನ ಕುಮಾರ್. ಎಸ್. ಕೊರಟಗೆರೆ.




















