ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಷ್ಟ್ರ ನಾಯಕರ ಆದರ್ಶ ಪಾಲನೆಗೆ ಕರೆ

ಹುನಗುಂದ: ತಮ್ಮ ಸರಳತೆ ಮತ್ತು ಆದರ್ಶ ಬದುಕಿನ ಮೌಲ್ಯಗಳ ಮೂಲಕ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ವಿಶ್ವ ಮಾನ್ಯತೆ ಪಡೆದರು. ಅಂಥವರ ಆದರ್ಶ ಬದುಕಿನ ನಡೆಯಲ್ಲಿ ನಾವು ಸಾಗಬೇಕು ಎಂದು ನಿವೃತ್ತ ಶಿಕ್ಷಕ ಎಸ್ಕೆ ಕೊನೆಸಾಗರ ಹೇಳಿದರು.
ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ಹಮ್ಮಿಕೊಂಡ ಇಬ್ಬರೂ ನಾಯಕರ ಜಯಂತಿ ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿದರು.
ಪ್ರಭಾರಿ ಪ್ರಾಚಾರ್ಯ ವಿ.ಕೆ.ಶಶಿಮಠ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು. ಸಿ.ಎಂ.ಪುರಂದರೆ ಸರ್ವ ಧರ್ಮ ಪ್ರಾರ್ಥನೆ ಮಾಡಿಸಿದರು.
ಐ.ಎಚ್.ನಾಯಕ ಸ್ವಾಗತಿಸಿದರು. ಡಾ.ಎನ್.ವೈ.ನದಾಫ್ ವಂದಿಸಿದರು.
ಕಾರ್ಯಕ್ರಮ ಮೊದಲು ಸ್ವಚ್ಛತಾ ಶ್ರಮದಾನ ನಡೆಯಿತು.

ನಿವೃತ್ತ ನೌಕರರ ಸಂಘದಲ್ಲಿ ಆಚರಣೆ
ಹುನಗುಂದ: ತಾಲೂಕು ಸರ್ಕಾರಿ ನಿವೃತ್ತ ಸಂಘದ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಅವರ ಜಯಂತಿಯನ್ನು ಅಧ್ಯಕ್ಷ ಎ.ಕೆ.ಉಪನಾಳ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಕಾರ್ಯದರ್ಶಿ ಡಿ.ವೈ.ಕೊಡಗಾನೂರ, ನಿರ್ದೇಶಕ ನಾಗಪ್ಪ ಕರಂಡಿ, ಸಿ.ಎಸ್. ಅಂಗಡಿ, ಎಲ್.ಜಿ. ದಿವಟಗಿ, ಎಸ್ಕೆ ಕೊನೆಸಾಗರ, ಸದಸ್ಯ ಆರ್.ಎಸ್.ರಾಜಮನಿ ಉಪಸ್ಥಿತರಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!