ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಧುಮೇಹ ಸ್ನೇಹಿ ಅಕ್ಕಿ ಮಳಿಗೆ ಉಧ್ಘಾಟನೆ

ಕುಶಾಲನಗರ: ಗೋಪಾಲ್ ಸರ್ಕಲ್ ಬಳಿ ಮಧುಮೇಹ ಸ್ನೇಹಿ ಅಕ್ಕಿಯ ದಾಸ್ತಾನು ಮಳಿಗೆ ‘ಲಕ್ಷ್ಮೀದೇವಿ ಟ್ರೇಡರ್ಸ್’ ಅನ್ನು ವೈದ್ಯರಾದ ಡಾ. ಪ್ರಾಣೇಶ್ ಇತ್ತೀಚೆಗೆ ಉದ್ಘಾಟಿಸಿದರು.

ಸಾಂದರ್ಭಿಕವಾಗಿ ಮಾತನಾಡಿದ ಅವರು, ‘ಮಧುಮೇಹ ಸ್ನೇಹಿ ಅಕ್ಕಿ’ಯು ಅತಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದ್ದು ಸೇವನೆಯ ನಂತರ ರಕ್ತದಲ್ಲಿ ಸಕ್ಕರೆಯ ಅಂಶವನ್ನು ಸಾಮಾನ್ಯ ಅಕ್ಕಿಯ ಹಾಗೆ ಹೆಚ್ಚು ಏರಿಸುವುದಿಲ್ಲ ಎಂದಲ್ಲದೆ ತೂಕ ನಿರ್ವಹಣೆ ಹಾಗೂ ಹೃದಯಕ್ಕೆ ಆರೋಗ್ಯಕರ ಎಂದು ಹೇಳಿದರು.

ನಂತರ ಮಾತನಾಡಿದ ಮಾಲೀಕರಾದ ವಿ. ಆರ್. ರಮ್ಯಾ ತಾವು ಕೇವಲ ವ್ಯಾಪಾರಿ ಮನೋಭಾವದಿಂದ ಮಾತ್ರ ಅಲ್ಲದೆ ಸಾಮಾಜಿಕ ಕಳಕಳಿಯಿಂದ ಹಾಗೂ ಇತ್ತೀಚೆಗೆ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಕಾಡುತ್ತಿರುವ ಮಧುಮೇಹ ಸಮಸ್ಯೆಗೆ ತುಸು ಮಟ್ಟಿಗೆ ಪರಿಹಾರ ನೀಡುವ ಸಲುವಾಗಿ ಮಳಿಗೆ ಆರಂಭಿಸಿರುವುದಾಗಿ ಹೇಳಿದರು.

ಈ ಸಂದರ್ಭ ಕ.ರ.ವೇ.ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜಾ, ಉಪಾಧ್ಯಕ್ಷ ವಿ. ಎಸ್. ರಾಜಶೇಖರ ಗೌಡ, ಅಕ್ಕಿಯನ್ನು ಸೇವಿಸಿ ಅದರ ಗುಣದ ಬಗ್ಗೆ ಸ್ವಯಂ ಮಾಹಿತಿ ಪಡೆದ ರವಿಕಿರಣ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ವರದಿ : ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!