ಕೊಪ್ಪಳ ಜಿಲ್ಲಾ ಹಾಗೂ ತಾಲೂಕಾ ಚು ಸಾ ಪ ವತಿಯಿಂದ, ಇತ್ತೀಚೆಗೆ ಇಹಲೋಕ ತ್ಯಜಿಸಿದ ಹಿರಿಯ ಸಾಹಿತಿ, ಕೊಪ್ಪಳ ಚು ಸಾ ಪ ದ ಸಕ್ರಿಯ ಪದಾಧಿಕಾರಿ ಹಾಗೂ ನಿವೃತ್ತ ಕನ್ನಡ ಶಿಕ್ಷಕರಾದ ದಿ. ಎಸ್. ಎಂ. ಕಂಬಾಳಿಮಠ್ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರಾಚಾರ್ಯರಾದ ಡಾ. ಮಹಾಂತೇಶ್ ಮಲ್ಲನಗೌಡರ್ ಸೇರಿದಂತೆ ಜಿಲ್ಲಾ ಚು ಸಾ ಪ ಅಧ್ಯಕ್ಷರು ಹಾಗೂ ಅಪ್ಪಳಿಸು ಪಾಕ್ಷಿಕ ಪತ್ರಿಕೆಯ ಸಂಪಾದಕ, ಪತ್ರಕರ್ತರು ಆದ ಶ್ರೀ ರುದ್ರಪ್ಪ ಬಂಡಾರಿ, ಪ್ರಧಾನ ಕಾರ್ಯದರ್ಶಿ ಹಾಗೂ ಕನ್ನಡ ಉಪನ್ಯಾಸಕರು, ಲೇಖಕರು ಆದ ಡಾ. ಮಹಾಂತೇಶ ಬಿ ನೆಲಾಗಣಿ, ಸಂಘಟನಾ ಕಾರ್ಯದರ್ಶಿ, ಉಪನ್ಯಾಸಕರು ಹಾಗೂ ಕವಿಗಳು ಆದ ಶ್ರೀ ಶಿವಪ್ರಸಾದ್ ಹಾದಿಮನಿ , ಕೊಪ್ಪಳ ತಾಲೂಕಾ ಚು ಸಾ ಪ ಅಧ್ಯಕ್ಷರು, ನಿವೃತ್ತ ಮುಖ್ಯ್ಯೊಪಾಧ್ಯಾಯರಾದ ಶ್ರೀ ಮೈಲಾರಪ್ಪ ಉಂಕಿ, ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಹಾಗೂ ಚಿತ್ರ ಕಲಾವಿದರು ಆದ ಶ್ರೀ ಎ. ಪಿ. ಅಂಗಡಿ ಹಾಗೂ ಕೊಪ್ಪಳ ವಿ ವಿ ಯ ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಹಾಗೂ ಕೊಪ್ಪಳ ತಾಲೂಕಾ ಚು ಸಾ ಪ ದ ಪದಾಧಿಕಾರಿಗಳು ಡಾ. ಬಸವರಾಜ್ ಗಡಾದ್ ಮತ್ತು ಸಮಾಜ ಸೇವಕರು,ರಾಜಕೀಯ ಧುರೀಣರು ಆದ ಶ್ರೀ ಮಂಜುನಾಥ್ ಸೊರಟೂರ್ ಪ್ರೊ. ರಾಜ್ ಬಿಗ್ ಪ್ರಿಂಟ್ ಕೊಪ್ಪಳ ಅವರು ಉಪಸ್ಥಿತರಿದ್ದರು, ಆರಂಭದಲ್ಲಿ ಮೌನಾಚರಣೆ ಸಲ್ಲಿಸಿ, ನಂತರ ಕಂಬಳಿಮಠ ಗುರುಗಳ ಸಾಹಿತ್ಯ ಸೇವೆ, ಅವರ ಭಾಷಾ ವೈಖರಿ ವಿಶೇಷವಾಗಿ ಹಳೆಗನ್ನಡ ಓದು ಮತ್ತು ವ್ಯಾಕರಣ ಹಾಗೂ ವಚನ ಸಾಹಿತ್ಯ ಕುರಿತಾದ ಅವರಿಗಿದ್ದ ಜ್ಞಾನ ಮತ್ತು ಅವರ ಸರಳ ಜೀವನ ಮತ್ತು ಉನ್ನತ ವಿಚಾರಧಾರೆ ಕುರಿತು ಮಾತನಾಡುತ್ತ ಸಾಹಿತ್ಯ ಲೋಕ ಅವರನ್ನು ಕಳೆದುಕೊಂಡು ಬಡವಾಗಿದೆ ಎಂದು ಸ್ಮರಿಸಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.




















