ಯಲಬುರ್ಗಾ : ತಾಲೂಕಿನ ಮುರಡಿ ಗ್ರಾಮದ ಆರಾಧ್ಯ ದೇವತೆ ಶ್ರೀದ್ಯಾಮಾಂಭಿಕಾ ದೇವಿ ಮೂರ್ತಿಯು ದಸರಾ ಹಬ್ಬದ ಪ್ರಯುಕ್ತ ಗ್ರಾಮ ಪ್ರವೇಶ ಕಾರ್ಯಕ್ರಮ ಬುಧವಾರ ಬೆಳಿಗ್ಗೆ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ವಿವಿಧ ಹೂ ಹಾಗೂ ಅಲಂಕಾರಿಕ ವಸ್ತುಗಳಿಂದ ದ್ಯಾಮಾಂಭಿಕಾ ದೇವಿ ಮೂರ್ತಿ ಅಲಂಕರಿಸಿ ಮಹಿಳೆಯರ ಕಳಸ, ಮೆರವಣಿಗೆ ಹಾಗೂ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಮೇರವಣಿಗೆ ಮಾಡಲಾಯಿತು ದ್ಯಾಮಾಂಬಿಕಾ ದೇವಿ ಮೂರ್ತಿಯು ಗ್ರಾಮ ಪ್ರವೇಶದ ಅಂಗವಾಗಿ ಗ್ರಾಮವನ್ನು ಸ್ವಚ್ಛಗೊಳಿಸಿ ಅಂಗಳಕ್ಕೆ ನೀರು ಸಿಂಪಡಿಸಿ ಗ್ರಾಮದ ಪ್ರತಿ ಮನೆಗಳ ಮುಂದೆ ಬಣ್ಣ ಬಣ್ಣಗಳ ರಂಗೋಲಿಯಿಂದ ಶೃಂಗರಿಸಲಾಗಿತ್ತು ನಾಡಿನ ಸಂಸ್ಕೃತಿ. ಸಂಪ್ರದಾಯ. ಧಾರ್ಮಿಕ ನಂಬಿಕೆ ಹಾಗೂ ಪರಸ್ಪರ ಸೌಹಾರ್ದತೆಯನ್ನು ಪ್ರತಿಬಿಂಬಿಸುವ ದಸರಾ ಹಬ್ಬದ ಸಂದರ್ಭದಲ್ಲಿ ಗ್ರಾಮ ದೇವತೆಯ ಬನ್ನಿ ಮೂಡುವ ಕಾರ್ಯಕ್ರಮವು ದ್ಯಾಮಮ್ಮ ದೇವೀ ದೇವಸ್ಥಾನದಿಂದ ಮೆರವಣಿಗೆ ಸಾಗಿ ಹವಳೆಮ್ಮ ದೇವಿಯ ದರ್ಶನ ಪಡೆದು ವಿವಿಧ ದೇವಸ್ಥಾನಕ್ಕೆ ತೆರಳಿ ಉಡಿ ತುಂಬಿಸಿಕೊಂಡು ಗ್ರಾಮದ ಪೋಲೀಸ್ ಗೌಡರ ಕಟ್ಟೆಗೆ ಬಂದು ಕುಳಿತುಕೊಳ್ಳುತ್ತಾಳೆ ಗ್ರಾಮದ ಎಲ್ಲಾ ಮಹಿಳೆಯರು ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿದರು ಸಂಜೆ ಏಳು ಗಂಟೆಯಿಂದ 10 ಗಂಟೆಯ ವರಗೆ ಬನ್ನಿ ಮಹಾಂಕಾಳಿ ಗಿಡಕ್ಕೆ ಹೊಗಿ ಬಂದ ನಂತರ ದಸರಾ ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯವಿದೆ. ಪರಸ್ಪರ ಒಬ್ಬರಿಗೊಬ್ಬರು ಬನ್ನಿ ನೀಡಿ, ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಹಿರಿಯರ ಆಶೀರ್ವಾದ ಪಡೆಯುವುದು ಈ ಆಚರಣೆಯ ವಿಶೇಷವಾಗಿದೆ.
ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಿ ಅರ್ಚಕ ಗಂಗಾಧರ ಬಡಿಗೇರ ಈಶಪ್ಪ ಬಡಿಗೇರ, ರಾಮಣ್ಣ ಬಡಿಗೇರ. ನಾಗರಾಜ ಬಡಿಗೇರ. ಕನಕಪ್ಪ ತಳವಾರ. ಹನಮಂತಪ್ಪ ಹಡಪದ ಸಿದ್ದನಗೌಡ ಪೊಲೀಸ್ ಪಾಟೀಲ್. ಉಮೇಶ ಗೌಡ ಮಾಲಿ ಪಾಟೀಲ್. ಗುಬ್ಬಣ್ಣ ಉಗ್ರಾಣ ಈರಪ್ಪ ಗುತ್ತೂರ. ಕನಕರಾಯ ಮಾರ್ನಾಳ ಸಿದ್ದಪ್ಪ ಯಡಿಯಾಪುರ ಬೂವಣ್ಣ ಚಾಕ್ರಿ ದೇವಪ್ಪ ಶಾಖಾಪೂರ ಹವಳೇಪ್ಪ ತಳವಾರ ಶರಣಪ್ಪ ಗಡಾದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




















