ಬೀದರ್:ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬೀದರ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಕರ್ನಾಟಕ ರಾಜ್ಯ ಏಡ್ಸ್
ಪ್ರಿವೆನ್ ಷನ್ ಸೊಸೈಟಿ ಬೆಂಗಳೂರು,ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಶಾಲಾ ಶಿಕ್ಷಣ ಇಲಾಖೆ,ಬೀದರ್ ಇವರ ಸಹಯೋಗದೊಂದಿಗೆ ಪ್ರೌಢಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಜಿಲ್ಲಾ ಮಟ್ಟದ ಯುವಜನೋತ್ಸವ ಅಂಗವಾಗಿ ರಸಪ್ರಶ್ನೆ ಸ್ಪರ್ಧೆ 2023 -24 ಕಾರ್ಯಕ್ರಮವನ್ನು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಬೀದರ್ ನಲ್ಲಿ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದಲ್ಲಿ ಶ್ರೀ ಹುಡುಗೆ ಗುಂಡಪ್ಪ ನೂಡಲ್ ಅಧಿಕಾರಿಗಳು ಜಿಲ್ಲಾ ವಿಜ್ಞಾನ ಕೇಂದ್ರ ಬೀದರ,ಶ್ರೀ ಸಾಯಿನಾಥ್ ವ್ಯವಸ್ಥಾಪಕರು ಜಿಲ್ಲಾ ವಿಜ್ಞಾನ ಕೇಂದ್ರ ಬೀದರ್, ಶ್ರೀ ಅನಿಲ್ ಕುಮಾರ್ ಚಿಂತಾಮಣಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಬೀದರ್ ಉಪಸ್ಥಿತರಿದ್ದರು.ಶ್ರೀ ಹುಡುಗೆ lಗುಂಡಪ್ಪ ನೂಡಲ್ ಅಧಿಕಾರಿಗಳು ವಿಜ್ಞಾನ ಕೇಂದ್ರ ಇವರು ಮಾತನಾಡಿ
ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳಲ್ಲಿ ಏಡ್ಸ್ ನ ಬಗ್ಗೆ ಜಾಗೃತಿ ಮೂಡಿಸುವುದು ಅತಿ ಅವಶ್ಯಕ ಅದು ಮುಂದಿನ ಭವಿಷ್ಯದ ವಿದ್ಯಾರ್ಥಿಗಳ ಬಾಳಿಗೆ ಒಂದು ಉತ್ತಮ ಸಮಾಜ ನಿರ್ಮಾಣವನ್ನು ಮಾಡಿಕೊಡುತ್ತದೆ ವಿದ್ಯಾರ್ಥಿಗಳಿಗೆ ಇದರ ಪೂರ್ಣ ಪ್ರಮಾಣದ ಜಾಗೃತಿ ಇದ್ದರೆ ಅವರು ಈ ರೋಗದಿಂದ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಳ್ಳಲು ಸಾಧ್ಯ ಮತ್ತು ಬೇರೆಯವರಿಗೆ ತಿಳಿಸಲು ಸಾಧ್ಯವಾಗುತ್ತದ ಇದೇ ಸಂದರ್ಭದಲ್ಲಿ ಅವರು ಮಕ್ಕಳ ಉತ್ತಮ ಫಲಿತಾಂಶಕ್ಕೆ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವನ್ನು ಕೋರಿದರು ಇದೇ ಸಂದರ್ಭದಲ್ಲಿ ಡಾಕ್ಟರ್ ಚಿಂತಾಮಣಿ ಸರ್ ಅವರು ಮಾತನಾಡಿ ಇದಕ್ಕೆ ತಮ್ಮೆಲ್ಲರ ಸಹಕಾರವು ಉತ್ತಮ ರೀತಿಯಲ್ಲಿ ಸಿಕ್ಕಿದೆ ಅದರಿಂದ ಇಡೀ ಜಿಲ್ಲೆಯ ಜನರು ಜಾಗೃತರಾಗಲು ಇದು ತುಂಬಾ ಸಹಕಾರಿಯಾಗಿದೆ ಮುಂದಿನ ದಿನಮಾನಗಳಲ್ಲಿ ಇನ್ನು ಹಲವು ರೀತಿಯ ಕಾರ್ಯಕ್ರಮವನ್ನು ಜಾಗೃತಿಗೆ ಬಳಸಲಾಗುವುದು ಎಂದು ಹೇಳಿದರು . ಅದೇ ರೀತಿಯಾಗಿ ಹೆಚ್ಚಿನ ಸಚ್ಚಿದಾನಂದ ಇಸಿಓ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೀದರ್ ಅವರು ಮಾತನಾಡಿ ಈ ಒಂದು ಸ್ಪರ್ಧೆಗೂ ಮುನ್ನ ಇದರ ಬಗ್ಗೆ ತಿಳುವಳಿಕೆ ಮೂಡಿಸುವಂತಹ ವಿಷಯಗಳನ್ನು ತಿಳಿಸಿಕೊಡಲು ಹೇಳಿದರು ನವೀನ ರೀತಿಯ ತಂತ್ರಜ್ಞಾನಗಳನ್ನು ಬಳಸುವುದೋಂದಿಗೆ ಸಾಂಪ್ರದಾಯಿಕವಾಗಿಯು ಕೂಡಾ ಏಡ್ಸ್ ನ ಜಾಗೃತಿ ಮೂಡಿಸಲು ಸಲಹೆ ಕೊಟ್ಟರು ಜಿಲ್ಲೆಯ ಸುಮಾರು 100 ವಿದ್ಯಾರ್ಥಿಗಳು ಈ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಮತ್ತು ವಿದ್ಯಾರ್ಥಿಗಳಿಗೆ ಇನ್ನೂ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹವನ್ನು ನೀಡಿದರು ಶ್ರೀ ಸೂರ್ಯಕಾಂತ್ ಜಿಲ್ಲಾ ಮೇಲ್ವಿಚಾರಕರು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಬೀದರ್ ಸ್ಪರ್ಧೆ ನಿಯಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಈ ಸ್ಪರ್ಧೆಯಲ್ಲಿ ಜಿಲ್ಲೆಯ ಸುಮಾರು 40 ವಿಜ್ಞಾನ ಶಿಕ್ಷಕರು ತಮ್ಮ ಮಕ್ಕಳೊಂದಿಗೆ ಭಾಗವಹಿಸಿದರು ಈ ಒಂದು ಸ್ಪರ್ಧೆಯನ್ನು ಯಶಸ್ವಿಯಾಗಲಿಕ್ಕೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಬೀದರ್ ನ ಸಿಬ್ಬಂದಿ ವರ್ಗ ತಮ್ಮ ಪೂರ್ಣ ಪ್ರಮಾಣದ ಸಹಕಾರವನ್ನು ನೀಡಿತ್ತು ಈ ಸ್ಪರ್ಧೆಯಿಂದ ಎಲ್ಲಾ ವಿದ್ಯಾರ್ಥಿಗಳು ತುಂಬಾ ಸಂತೋಷಪಟ್ಟರು ಮುಂದಿನ ದಿನಮಾನಗಳಲ್ಲಿ ಜಿಲ್ಲಾಡಳಿತದಿಂದ ಇನ್ನು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರು ನಾವು ಭಾಗವಹಿಸುತ್ತೇವೆ ಎಂದು ಹೇಳಿದರು.
ವರದಿ-ಮಹಾನ್ ಕೋಟೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.