ಯಾದಗಿರಿ ಜಿಲ್ಲೆಯ ಸುರಪುರ ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು.
ಮಹರ್ಷಿ ವಾಲ್ಮೀಕಿ ಮೂರ್ತಿಯ ವಿಚಾರವಾಗಿ ತಹಶೀಲ್ದಾರ ಬಿ.ವಿಜಯಕುಮಾರ್ ಅವರ ಸಮ್ಮುಖದಲ್ಲೇ ನಗರಸಭೆ ಆಯುಕ್ತರಿಗೆ ನಾಯಕ ಸಮುದಾಯದ ಕೆಲ ಮುಖಂಡರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆಯು ನಡೆದಿದೆ ಎನ್ನಲಾಗಿದೆ.
ಅತೀ ಶೀಘ್ರದಲ್ಲೇ ನಗರಸಭೆ ಸದಸ್ಯರ ತುರ್ತು ಸಭೆ ಕರೆಯುವಂತೆ ವಾಲ್ಮೀಕಿ ಮುಖಂಡರು ಪಟ್ಟು ಹಿಡಿದರು.
ಮುಖಂಡರ ಮಾತಿಗೆ ಮಣಿದು ತುರ್ತು ಸಭೆ ಕರೆಯುವುದಾಗಿ ಆಯುಕ್ತರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ಭಾವಿ ಸಭೆ ಮುಂದುವರೆಯಿತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಅಧ್ಯಕ್ಷ ಗಂಗಾಧರ ಆರ್ ನಾಯಕ,ರಮೇಶ ದೊರೆ ಆಲ್ದಾಳ,ಉಪೇಂದ್ರ ಸುಬೇದಾರ್,ಬಲಭೀಮ ನಾಯಕ,ಅಯ್ಯಣ್ಣ ಹಾಲಬಾವಿ,ಬಸವರಾಜ ಹೆಮ್ಮಡಗಿ,ಹಣಮಂತ ಪೇಠ ಅಮ್ಮಾಪುರ್,ಮೌನೇಶ ಬಡಿಗೇರ್, ಚಂದ್ರಶೇಖರ ವಜ್ಜಲ್,ಪರಮಣ್ಣ ಕಕ್ಕೇರಾ, ಶಿವುರಾಜ್ ವಾಗಿಣಗೇರಾ,ಸಚಿನ್ ಕುಮಾರ್ ನಾಯಕ ಇತರರು ಉಪಸ್ಥಿತರಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.