ಬೀದರ್:ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ,
ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ
ದಿ.12-10-2023 ರಂದು
ಐಕ್ಯೂಎಸಿ ವಿಭಾಗದಿಂದ ನ್ಯಾಕ್ ಕುರಿತು ವಿಶೇಷ ಕಾರ್ಯಾಗಾರ” ಹಮ್ಮಿಕೊಳ್ಳಲಾಯಿತು.
“ನ್ಯಾಕ್ ಎನ್ನುವುದು ಶೈಕ್ಷಣಿಕ ಮಾರ್ಗಗಳ ವಿಸ್ತರಣೆ ಹಾಗೂ ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಹೆಚ್ಚಿಸುವ ಪ್ರಕ್ರಿಯೆಯಾಗಿದೆ”ಎಂದು ಡಾ. ಸಂಗಶೆಟ್ಟಿ ಶೆಟಕಾರ ಅವರ ಅಭಿಮತವನ್ನು ವ್ಯಕ್ತಪಡಿಸಿದರು.
ನ್ಯಾಕ್ ಎನ್ನುವುದು ಭಯಪಡುವ ವಿಷಯವಲ್ಲ. ಅದನ್ನು ಶಿಕ್ಷಣ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಕೂಡಿಕೊಂಡು ಕೆಲಸಮಾಡುವ ಮೂಲಕ ಉತ್ತಮ ಮಾನ್ಯತೆಗಳಿಸಲು ಸಾಧ್ಯವಾಗುತ್ತದೆ ಶಿಕ್ಷಣ ಕ್ಷೇತ್ರದಲ್ಲಿ ಆಧುನಿಕ ಶೈಲಿಯ ವಿಧಾನಗಳನ್ನು ಅಳವಡಿಸಿಕೊಂಡು,ಸುಸ್ಥಿರ ಆರ್ಥಿಕ ಅಭಿವೃದ್ಧಿ ಹೊಂದಲು ಶಿಕ್ಷಣ ಸಂಸ್ಥೆಗಳು ಪ್ರಯತ್ನ ಪಡಬೇಕು. ಪ್ರಸ್ತುತ ದಿನದಲ್ಲಿ ಪ್ರತಿಯೊಂದು ಮಹಾವಿದ್ಯಾಲಯಗಳು ನ್ಯಾಕ್ ಪಡೆಯುವುದು ಅವಶ್ಯಕವಾಗಿದ್ದು,ಶೈಕ್ಷಣಿಕ ಮಾರ್ಗಗಳ ವಿಸ್ತರಣೆಗೆ ಹಾಗೂ ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಹೆಚ್ಚಿಸುವುದಾಗಿದೆ ಎಂದು ಹೇಳಿದರು.
ಇಂದಿನ ಶಿಕ್ಷಣ ಸಂಸ್ಥೆಗಳಲ್ಲಿರುವ ನ್ಯೂನತೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಒಪ್ಪಿಕೊಳ್ಳುವ ಇಚ್ಚೆಯಿಂದ ಗುಣಮಟ್ಟದಲ್ಲಿ ಸುಧಾರಣೆಯ ಅಗತ್ಯ ಕಂಡುಕೊಳ್ಳಬೇಕು ಪ್ರಾಂಶುಪಾಲರು ತಮ್ಮ ಸಂಸ್ಥೆಗಳಲ್ಲಿ ಬದಲಾವಣೆಯ ನಾಯಕರಾಗಬೇಕು. ಸಾಮರ್ಥ್ಯ ವರ್ಧನೆ ಮತ್ತು ಸಬಲೀಕರಣದತ್ತ ಸಾಗಿ ಸಾಂಪ್ರದಾಯಿಕ ಪಠ್ಯಜ್ಞಾನವನ್ನು ಮೀರಿ ಸರಿಯಾದ ತಂತ್ರಜ್ಞಾನವನ್ನು ಬಳಸುವ ಅಗತ್ಯವನ್ನು ಶಿಕ್ಷಕರಿಗೆ ಮನವರಿಕೆ ಮಾಡಬೇಕು. ವಿದ್ಯಾರ್ಥಿಗಳಿಗೆ ಪದವಿ ನೀಡಿದರೆ ಸಾಲದು ಉದ್ಯೋಗಶೀಲತೆ,ರಾಷ್ಟ್ರಿಯ,ಜಾಗತಿಕವಾಗಿ ಅವರನ್ನು ಸಜ್ಜುಗೊಳಿಸುವ ಕಾರ್ಯ ಮಹಾವಿದ್ಯಾಲಯಗಳು ಮಾಡಬೇಕು ಎಂದು ಹೇಳಿದರು.ಐಕ್ಯೂಎಸಿ ಮತ್ತು ನ್ಯಾಕ್ ಮಾನ್ಯತೆ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ ಸಿ.ಕನಕಟ್ಟೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಗುಣಮಟ್ಟದ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ತನ್ನ ಹಿರಿಮೆಯನ್ನು ಸ್ಥಾಪಿಸಿಕೊಂಡಿರುವುದು ನಮ್ಮ ಶಿಕ್ಷಣ ಮಹಾವಿದ್ಯಾಲಯ ಇಂದು ನ್ಯಾಕ್ ಮಾನ್ಯತೆ ಪಡೆಯಲು ಯುಜಿಸಿ ಮತ್ತು ನ್ಯಾಕ್ ಉಪಕ್ರಮವನ್ನು ಆಯೋಜಿಸುತ್ತಿರುವುದು ನಮಗೆ ಸಂತೋಷಕರವಾಗಿದೆ ಆಂತರಿಕ ಗುಣಮಟ್ಟದ ಭರವಸೆ ಕೋಶ (ಐಕ್ಯೂಎಸಿ) ಪ್ರಾರಂಭಿಸಿ ಹೆಚ್ಚಿನ ಜ್ಞಾನವನ್ನು ಪಡೆದು ಅಧ್ಯಾಪಕರ ಜೊತೆ ಸಮಾಲೋಚನೆ ಹೊಂದಿ ಯುಜಿಸಿ ಘೋಷಿತ ಗುರಿಗಳ ಜೊತೆಗೆ ನ್ಯಾಕ್ ಮಾನ್ಯತೆ ಪಡೆಯಲು ಪ್ರಯತ್ನಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿವಿಬಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪಿ.ವಿಠ್ಠಲರೆಡ್ಡಿ ಅವರು ಅತಿಥಿ ಸ್ಥಾನ ವಹಿಸಿದರು.(ಐಕ್ಯೂಎಸಿ) ಕೋ-ಆರ್ಡಿನೆಟರ್ ಸಂತೋಷಕುಮಾರ ಸಜ್ಜನ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.
ಕಾರ್ಯಾಗಾರದಲ್ಲಿ ಬೀದರ ಜಿಲ್ಲೆಯ ಎಲ್ಲಾ ಶಿಕ್ಷಣ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಪ್ರಾಧ್ಯಾಪಕರುಗಳು ಭಾಗವಹಿಸಿದರು.
ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಉಪನ್ಯಾಸಕರಾದ ವೀಣಾ ಜಲಾದೆ ನಿರೂಪಿಸಿದರು,ಶಿಲ್ಪಾ ಹಿಪ್ಪರಗಿ ಸ್ವಾಗತಿಸಿದರು ಪಾಂಡುರಂಗ ಕುಂಬಾರ ವಂದಿಸಿದರು. ಉಪನ್ಯಾಸಕರಾದ ರಾಜಕುಮಾರ ಶಿಂಧೆ,ಡಾ.ಸಿದ್ಧರಾಮ ನೆಂಗಾ ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ:ಸಾಗರ್ ಪಡಸಲೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.