ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಇತ್ತೀಚೆಗೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಪಡೆಯುತ್ತಿರುವ ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ಅವರನ್ನು ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪುರ ಮತ್ತು ತಂಡದ ಸದಸ್ಯರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಆರೋಗ್ಯ ವಿಚಾರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಕರ್ನಾಟಕ ರಾಜ್ಯದ ಪರಿಸರ ಪ್ರೇಮಿ ಎಂದು ಖ್ಯಾತಿ ಹೊಂದಿರುವ ಹಾಗೂ ನಮಗೆಲ್ಲರಿಗೂ ಮಾರ್ಗದರ್ಶಕರಾಗಿರುವ ನನ್ನ ಸ್ಪೂರ್ತಿದಾಯಕರಾಗಿರುವ ಸಾಲುಮರದ ತಿಮ್ಮಕ್ಕ ಅಮ್ಮನವರು ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ.ಅವರಿಗೆ ಸದ್ಯ 112 ವರ್ಷಗಳ ವಯಸ್ಸನ್ನು ಹೊಂದಿದವರು ಈ ವಯಸ್ಸಿನಲ್ಲಿ ಉಸಿರಾಟದ ತೊಂದರೆಗಳು ಸಹಜವಾಗಿಯೇ ಬರುತ್ತದೆ.ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ ಇನ್ನೂ ಕೆಲವೇ ದಿನಗಳಲ್ಲಿ ಅವರನ್ನು ವೈದ್ಯರು ಆಸ್ಪತ್ರೆಯಿಂದ ಮನೆಗೆ ಕಳಿಲಾಗುವುದೆಂದು ಅವರ ದತ್ತುಪುತ್ರರಾದ ಉಮೇಶ ಅವರು ತಿಳಿಸಿದ್ದಾರೆ.ವೃಕ್ಷ ಮಾತೆ ಅಮ್ಮನವರ ಆದಷ್ಟೂ ಬೇಗ ಗುಣಮುಖರಾಗಿ ಬರಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ ಆದರೆ ಯಾರೂ ಕೂಡಾ ನಿಖರವಾದ ಮಾಹಿತಿ ತಿಳಿಯದೆ ಸುಳ್ಳು ಸುದ್ದಿಗಳನ್ನು ಹರಡಿಸಬೇಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರಾದ ಅಮರೇಗೌಡ ಮಲ್ಲಾಪುರ,ಸಾಲುಮರದ ತಿಮ್ಮಕ್ಕನವರ ದತ್ತು ಪುತ್ರ ಉಮೇಶ,ಅಮರಯ್ಯ ಸ್ವಾಮಿ ಪತ್ರಿಮಠ,ಶರಣಬಸವ ಚನ್ನಳ್ಳಿ(VCN),ಮಹಾಂತೇಶ ಉಪ್ಪಾರ ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.